ವಿಕಾಸ್ ಕಾಲೇಜಿಗೆ ಶೇ. 97.65 ಫಲಿತಾಂಶ

ಮಂಗಳೂರು, ಮೇ 12: ಈ ಬಾರಿಯ ಪಿಯುಸಿ ಫಲಿತಾಂಶದಲ್ಲಿ ವಿಕಾಸ್ ಕಾಲೇಜು ಶೇ. 97.65 ಫಲಿತಾಂಶ ದಾಖಲಿಸಿದೆ.
ಪರೀಕ್ಷೆಗೆ ಹಾಜರಾದ ಕಾಲೇಜಿನ 341 ವಿದ್ಯಾರ್ಥಿಗಳಲ್ಲಿ 108 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 211 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಕಾಲೇಜು ವಾಣಿಜ್ಯ ವಿಭಾಗದಲ್ಲಿ ಶೇ. 100, ವಿಜ್ಞಾನ ವಿಭಾಗದಲ್ಲಿ ಶೇ. 97.46 ಫಲಿತಾಂಶ ದಾಖಲಿಸಿದೆ.
ಟಾಪರ್ಸ್: ವಿಜ್ಞಾನ ವಿಭಾಗ: ಶಾಲಿನಿ ಬಿ.ಎಂ. 583 ಅಂಕಗಳು (ಭೌತಶಾಸ್ತ್ರ ಮತ್ತು ಗಣಿತದಲ್ಲಿ ತಲಾ 100), ಶ್ರಾವ್ಯಾ ಕೆ.ಜೆ. 580 ಅಂಕಗಳು (ಭೌತ ಶಾಸ್ತ್ರ 100 ಮತ್ತು ಜೀವಶಾಸ್ತ್ರ 99), ಯುಕ್ತ 580 ಅಂಕಗಳು (ಸಂಸ್ಕೃತ 99, ಗಣಿತ 99, ಕಂಪ್ಯೂಟರ್ 100), ಐಶ್ವರ್ಯಾ ಬಿ. 578 ಅಂಕಗಳು (ಜೀವ ಶಾಸ್ತ್ರ 99 ಮತ್ತು ಗಣಿತ 99), ಹಂಸಿನಿ 572 ಅಂಕಗಳು (ಜೀವ ಶಾಸ್ತ್ರ 100).
ವಾಣಿಜ್ಯ ವಿಭಾಗ: ಸೌಹಾರ್ದ್ ಶೆಟ್ಟಿ 571 ಅಂಕಗಳನ್ನು (ಬಿಸಿನೆಸ್ ಸ್ಟಡೀಸ್ 100, ಅಕೌಂಟ್ಸ್ 100 ಮತ್ತು ಸ್ಟಾಟ್ 100) ಗಳಿಸಿ ಸಾಧನೆ ಮೆರೆದಿದ್ದಾರೆ.
Next Story





