ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ
ಚನ್ನಗಿರಿ, ಮೇ 12: ಸಾಲಬಾಧೆೆ ತಾಳದೆ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಕೊರಟಿಕೆರೆ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ.
ಗ್ರಾಮದ ಕೆ.ಜಿ. ರುದ್ರೇಶ್(30) ಆತ್ಮಹತ್ಯೆ ಮಾಡಿಕೊಂಡ ರೈತ ಎನ್ನಲಾಗಿದೆ. ಹೊದಿಗೆರೆ ಕೆನರಾ ಬ್ಯಾಂಕ್‌ನಲ್ಲಿ 2.5 ಲಕ್ಷ, ಚಿಕ್ಕಗಂಗೂರು ಸಹಕಾರ ಬ್ಯಾಂಕ್‌ನಲ್ಲಿ 30 ಸಾವಿರ ರೂ. ಸಾಲ ಮಾಡಿದ್ದ.
ಈತನಿಗೆ 2.5 ಎಕರೆ ಅಡಕೆ ತೋಟ ಇತ್ತು. ತೋಟದಲ್ಲಿ 2 ಕೊಳವೆ ಬಾವಿ ವಿಫಲವಾಗಿ ಶೇ. 80ರಷ್ಟು ಬೆಳೆ ಒಣಗಿತ್ತು. ಇದರಿಂದ ಮನನೊಂದು ಮನೆಯಲ್ಲಿ ನೇಣು ಬಿಗಿದುಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಕುರಿತು ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





