ಬೈಕ್-ಲಾರಿ ಢಿಕ್ಕಿ: ವ್ಯಕ್ತಿ ಮೃತ್ಯು
ದಾವಣಗೆರೆ, ಮೇ 12: ಬೈಕ್ ಹಾಗೂ ಲಾರಿ ನಡುವೆ ಪರಸ್ಪರ ಢಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ತಾಲೂಕಿನ ಕಲ್ಪನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.
ಮೃತನನ್ನು ದಾವಣಗೆರೆ ತಾಲೂಕಿನ ಕರಿಲಕ್ಕೇನಹಳ್ಳಿಯ ನಿವಾಸಿ ಕೆ.ಟಿ. ಗಣೇಶ್ (37) ಎನ್ನಲಾಗಿದೆ. ತನ್ನ ಗ್ರಾಮದಿಂದ ದಾವಣಗೆರೆಗೆ ಬರುತ್ತಿದ್ದ ಸಂದಭರ್ ಎದುರಿಗೆ ಬಂದ ವಿಆರ್‌ಎಲ್ ಕಂಪೆನಿಗೆ ಸೇರಿದ ಲಾರಿ ಢಿಕ್ಕಿ ಹೊಡೆದಿದೆ.
ಈ ಕುರಿತು ದಾವಣಗೆರೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಲಾರಿ ಹಾಗೂ ಲಾರಿ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story





