ಕರಿಮೆಣಸು ಕಳವು: ಆರೋಪಿಯ ಬಂಧನ
ಸುಂಟಿಕೊಪ್ಪ, ಮೇ 12: ಮಾಲಕರು ಮನೆಯಲ್ಲಿಲ್ಲದ ಸಂದರ್ಭದಲ್ಲಿ ಕರಿಮೆಣಸನ್ನು ಕದ್ದೊಯ್ದ ಆರೋಪಿಯನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ 7ನೆ ಹೊಸಕೋಟೆಯ ಕಾಫಿ ಬೆಳೆಗಾರ ದಿಲೀಪ್ ಕುಮಾರ್ ಕಾರ್ಯನಿಮಿತ್ತ ಬೆಂಗಳೂರಿಗೆ ತೆರಳಿದ್ದರು. ಮನೆಕೆಲಸ ದಾಕೆ ಸುಮಾ ಎಂಬಾಕೆಗೆ ಮನೆಯ ಬೀಗದ ಕೀ ಹಾಗೂ ಗೋದಾಮು ಕೀ ನೀಡಿ ತೆರಳಿದ್ದರು ವಾಪಸು ಮನೆಗೆ ಬಂದು ಪರೀಶಿಲಿಸಿದಾಗ ಗೋದಾಮಿನಲ್ಲಿದ್ದ ಕರಿಮೆಣಸು ಚೀಲ ನಾಪತ್ತೆಯಾಗಿತ್ತು.
ಈ ಬಗ್ಗೆ ಸುಂಟಿಕೊಪ್ಪ ಪೊಲೀಸರಿಗೆ ದೂರು ನೀಡಿದ ಮೇರೆ ಪೊಲೀಸರು ತನಿಖೆ ನಡೆಸಿದಾಗ ಮನೆ ಕೆಲಸದಾಕೆಯ ಗಂಡ ಶಿವನ್ ಎಂಬಾತನೇ ಕಳ್ಳತನ ನಡೆಸಿದ್ದು ಪತ್ತೆಯಾಗಿದೆ. 7ನೆ ಹೊಸಕೋಟೆ ಅಂಗಡಿ ಮಾಲಕರೊಬ್ಬರಿಗೆ, ಆರೋಪಿ ಶಿವನ್ ಕದ್ದ 60 ಕೆ.ಜಿ ಕರಮೆಣಸನ್ನು ಮಾರಿರುವುದು ಪತ್ತೆ ಹಚ್ಚಲಾಗಿದೆ. ಆರೋಪಿಯನ್ನು ಸುಂಟಿಕೊಪ್ಪ ಪೊಲೀಸ್ ಠಾಣಾಧಿಖಾರಿ ಭೋಜಪ್ಪ ನೇತೃತ್ವದಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
Next Story





