ರಸ್ತೆ ಅಪಘಾತ: ಮಹಿಳೆ ಮೃತ್ಯು

ಮಡಿಕೇರಿ ಮೇ 12: ನಿಂತಿದ್ದ ಟ್ಯಾಂಕರ್‌ಗೆ ಮಿನಿಬಸ್ ಢಿಕ್ಕಿಯಾಗಿ ಪಲ್ಟಿಯಾದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಸುಂಟಿಕೊಪ್ಪ ಸಮೀಪ ಏಳನೇ ಹೊಸಕೋಟೆಯಲ್ಲಿ ನಡೆದಿದೆ.
ತಮಿಳುನಾಡಿನ ತಿರುಪುರಂ ಜಿಲ್ಲೆಯ ವೆಲ್ಲಿಕೊಯ್ಲು ಎಂಬ ಗ್ರಾಮದಿಂದ ಪ್ರವಾಸಕ್ಕೆಂದು ಮಡಿಕೇರಿಗೆ ಆಗಮಿಸಿದ್ದ 13 ಜನರಿದ್ದ ಮಿನಿಬಸ್ 7ನೇ ಹೊಸಕೋಟೆ ವೃತ್ತದ ಬಳಿ ಟ್ಯಾಂಕರ್ ಗೆ ಢಿಕ್ಕಿ ಯಾದ ಪರಿಣಾಮ ಬಸ್‌ನಲ್ಲಿದ್ದ ಮಹಿಳೆ ಮೋಹಿನಾ ಸ್ಥಳದಲ್ಲೇ ಮೃತಪಟ್ಟಿದ್ದು ಸಹ ಪ್ರಯಾಣಿಕರು ಗಾಯಗೊಂಡಿದ್ದಾರೆ. ಈ ಬಗ್ಗೆ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





