ಪ್ರೊ ಕಬಡ್ಡಿಯ ಹೊಸ ತಂಡಕ್ಕೆ ಸಚಿನ್ ತೆಂಡುಲ್ಕರ್ ಸಹ ಮಾಲಕ

ಮುಂಬೈ, ಮೇ 12: ಐದನೆ ಆವೃತ್ತಿಯ ಪ್ರೊ ಕಬಡ್ಡಿ ಲೀಗ್(ಪಿಕೆಎಲ್) ಟೂರ್ನಮೆಂಟ್ ಜುಲೈಯಿಂದ ಅಕ್ಟೋಬರ್ ತನಕ ನಡೆಯಲಿದ್ದು, ಈ ವರ್ಷ ನಾಲ್ಕು ಹೊಸ ಕಬಡ್ಡಿ ತಂಡಗಳು ಸೇರ್ಪಡೆಯಾಗಲಿವೆ. ಈ ಪೈಕಿ ಒಂದು ತಂಡವನ್ನು ಕ್ರಿಕೆಟ್ ದಂತಕತೆ ಸಚಿನ್ ತೆಂಡುಲ್ಕರ್ ಖರೀದಿಸಿದ್ದಾರೆ.
ತೆಂಡುಲ್ಕರ್ ಅವರು ಎನ್. ಪ್ರಸಾದ್ ಜೊತೆಗೂಡಿ ತಮಿಳುನಾಡು ಮೂಲದ ಫ್ರಾಂಚೈಸಿಯನ್ನು ಖರೀದಿಸಿದ್ದಾರೆ. ಜೆಎಸ್‌ಡಬ್ಲು ಗ್ರೂಪ್, ಅದಾನಿ ಗ್ರೂಪ್, ಜಿಎಂಆರ್ ಗ್ರೂಪ್‌ನವರು ಹರ್ಯಾಣ, ಗುಜರಾತ್ ಹಾಗೂ ಉತ್ತರಪ್ರದೇಶ ತಂಡಗಳನ್ನು ಖರೀದಿಸಿದ್ದಾರೆ.
ಕಬಡ್ಡಿ ಲೀಗ್‌ನಲ್ಲಿ ಈಗಾಗಲೇ ನಗರ ಮೂಲದ 8 ಫ್ರಾಂಚೈಸಿಗಳಿವೆ. ಅವುಗಳೆಂದರೆ: ದಿಲ್ಲಿ, ಮುಂಬೈ, ಬೆಂಗಳೂರು, ಕೋಲ್ಕತಾ, ಹೈದರಾಬಾದ್, ಪಾಟ್ನಾ, ಪುಣೆ ಹಾಗೂ ಜೈಪುರ.
Next Story





