ದ.ಕ.: ಐದು ಕಾಲೇಜ್ ಗಳಿಗೆ ಶೇ. 100 ಫಲಿತಾಂಶ

ಮಂಗಳೂರು, ಮೇ 12: ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ದ.ಕ ಜಿಲ್ಲೆಯ ಐದು ಕಾಲೇಜುಗಳು ಶೇ. 100 ಫಲಿತಾಂಶ ದಾಖಲಿಸಿವೆ.
ಆದರೂ ಇದು ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿಯ ಫಲಿತಾಂಶದಲ್ಲಿ ಇಳಿಕೆ ಕಂಡಿದೆ. ಕಳೆದ ಬಾರಿ ಜಿಲ್ಲೆಯಲ್ಲಿ 7 ಶಾಲೆಗಳು ನೂರಕ್ಕೆ ನೂರು ಫಲಿತಾಂಶ ದಾಖಲಿಸಿಕೊಂಡಿದ್ದವು. ಈ ಬಾರಿಯ ಜಿಲ್ಲೆಯಲ್ಲಿ ಒಂದು ಸರಕಾರಿ ಪಿಯು ಕಾಲೇಜು ನೂರಕ್ಕೆ ನೂರು ಫಲಿತಾಂಶ ಪಡೆದಿರುವುದು ವಿಶೇಷವಾಗಿದೆ.
ಸರಕಾರಿ ಪಿಯು ಕಾಲೇಜು ಅರಸಿನಮಕ್ಕಿ ಹಿತ್ಯಡ್ಕ, ಕೃಷ್ಣಾಪುರದ ಅಲ್ ಬದ್ರಿಯಾ ಪ.ಪೂ.ಕಾ., ಮೆಡಲಿನ್ ಪ.ಪೂ.ಕಾ ಮುಲ್ಕಿ, ಮ್ಯಾಪ್ಸ್ ಕಾಲೇಜು ಬಂಟ್ಸ್ ಹಾಸ್ಟೆಲ್, ಆಯಿಷಾ ಪ.ಪೂ.ಕಾ. ಆತೂರು ಈ ಬಾರಿ ಶೇ. ನೂರು ಫಲಿತಾಂಶ ಪಡೆದ ಕಾಲೇಜುಗಳಾಗಿವೆ.
ಕಳೆದ ಬಾರಿ ಪುತ್ತೂರಿನ ಸೈಂಟ್ ಜಾರ್ಜ್ ಪ.ಪೂ.ಕಾ. ನೆಲ್ಯಾಡಿ, ಮಂಗಳೂರಿನ ರಾಮಾಶ್ರಮ ಪ.ಪೂ.ಕಾ., ಪುತ್ತೂರಿನ ದುರ್ಗಾಂಬ ಪ.ಪೂ.ಕಾ. ಅಲಂಗಾರು, ಮಂಗಳೂರಿನ ಇಸ್ಲಾಹಿ ಪ.ಪೂ.ಕಾ. ಉಳ್ಳಾಲ, ನವಚೇತನಾ ಪ.ಪೂ.ಕಾ. ನೀರುಮಾರ್ಗ, ಅಲ್ ಬದ್ರಿಯ ಪ.ಪೂ.ಕಾ. ಕಾಟಿಪಳ್ಳ, ಸೈಂಟ್ ಅಂತೋನಿ ಪ.ಪೂ.ಕಾ. ಕುಟಿನ್ನೋಪದವು ಶೇ. 100 ಫಲಿತಾಂಶ ದಾಖಲಿಸಿದ್ದವು.





