ಬುರೂಜ್ ಶಾಲೆಗೆ 89.5 ಶೇ. ಫಲಿತಾಂಶ
ಬಂಟ್ವಾಳ, ಮೇ 12: ಕರ್ನಾಟಕ ಪರೀಕ್ಷಾ ಮಂಡಳಿ ನಡೆಸಿರುವ 2016-17 ಎಸೆಸೆಲ್ಸಿ ಪರೀಕ್ಷೆಯಲ್ಲಿ ರಝಾನಗರ ಮೂಡುಪಡುಕೋಡಿ ಬುರೂಜ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ 87.5 ಶೇ. ಫಲಿತಾಂಶ ದಾಖಲಿಸಿದೆ.
ಸಹನಾ ಶೆಟ್ಟಿ 563 (90.8 ಶೇ.), ಅಹ್ಮದ್ ಅಲ್ತಾಫ್ 549 (87.84 ಶೇ.) ಹಾಗೂ ಪ್ರಜ್ವಲ್, ಶಮನಾರ್ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿನಿ ದಿಲ್‌ನಾಝ್ ಹಿಂದಿ ಭಾಷೆಯಲ್ಲಿ 100 ಅಂಕ ಗಳಿಸಿ ಸಾಧನೆ ಮಾಡಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





