ತುಂಬೆ ಬಿ.ಎ. ಪ್ರೌಢಶಾಲೆಗೆ 98 ಶೇ. ಫಲಿತಾಂಶ

ಬಂಟ್ವಾಳ, ಮೇ 12: ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ತುಂಬೆ ಆಂಗ್ಲ ಮಾಧ್ಯಮ ಪ್ರೌಢಶಾಲೆ 98 ಶೇಕಡ ಫಲಿತಾಂಶ ದಾಖಲಾಗಿದೆ.
4 ಮಂದಿ ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿಯಲ್ಲಿ, 36 ಮಂದಿ ಪ್ರಥಮ ದರ್ಜೆ, 5 ಮಂದಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಆಂಗ್ಲ ಮಾಧ್ಯಮದಲ್ಲಿ 587 ಅಂಕ ಗಳಿಸಿ ಸ್ಪೂರ್ತಿ ರಮೇಶ್ ಪ್ರಥಮ ಹಾಗೂ 585 ಅಂಕ ಗಳಿಸಿ ಅಬ್ದುಲ್ ನುಮಾನ್ ದ್ವಿತೀಯ ಸ್ಥಾನ ಪಡೆದಿದ್ದಾರೆ. ಕನ್ನಡ ಮಾಧ್ಯಮ ವಿಭಾಗದ ಧನ್ಯಶ್ರೀ 560 ಅಂಕ ಪಡೆದು ಪ್ರಥಮ ಸ್ಥಾನ ಪಡೆದಿದ್ದಾಳೆ ಎಂದು ಸಂಸ್ಥೆ ಪ್ರಕಟನೆ ತಿಳಿಸಿದೆ.
Next Story





