ಆರೆಸ್ಸೆಸ್ ಕಾರ್ಯಕರ್ತನ ಕೊಲೆ ದುರದೃಷ್ಟಕರ: ಪಿಣರಾಯಿ

ತಿರುವನಂತಪುರಂ,ಮೇ 13: ಕಣ್ಣೂರಿನಲ್ಲಿ ನಡೆದ ಆರೆಸ್ಸೆಸ್ ಕಾರ್ಯಕರ್ತನ ಕೊಲೆಕೃತ್ಯ ದುರದೃಷ್ಟಕರ ವೆಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಕಣ್ಣೂರಿನಲ್ಲಿ ಶಾಂತಿ ಪ್ರಯತ್ನಗಳಿಗೆ ಇದು ಅಡ್ಡಿಯಾಗುವುದಿಲ್ಲ. ಅರೋಪಿಗಳನ್ನು ಕಾನೂನಿನ ಮುಂದೆತಂದು ನಿಲ್ಲಿಸಲಾಗುವುದು. ಘಟನೆ ಹೆಚ್ಚು ಉದ್ವಿಗ್ನತೆಯೆಡೆಗೆ ಸಾಗದಂತೆ ಸಂಬಂಧಿಸಿದವರು ಎಚ್ಚರವಹಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಆರೆಸ್ಸೆಸ್ ರಾಮಂತಳಿ ಮಂಡಲ ಕಾರ್ಯವಾಹಕ್ ರಾಮಂತಳಿ ಕಕ್ಕಾಂಪಾರ ಚುರಕ್ಕಾಟ್ ಬಿಜು ನಿನ್ನೆ ಇರಿತಕ್ಕೊಳಗಾಗಿ ಮೃತಪಟ್ಟಿದ್ದರು. ಶುಕ್ರವಾರ ಅಪರಾಹ್ನ 3:30ಕ್ಕೆ ಪಾಲಕ್ಕಾಡ್ ಸೇತುವೆ ಬಳಿ ಕೊಲೆಕೃತ್ಯನಡೆದಿತ್ತು. ಬೈಕ್‌ನಲ್ಲಿ ಬರುತ್ತಿದ್ದ ಬಿಜುವನ್ನು ಹಿಂಬಾಲಿಸಿ ಬಂದಿದ್ದ ಕಾರಿನಲ್ಲಿ ಬಂದ ತಂಡವೊಂದು ಢಿಕ್ಕಿಹೊಡೆದುಬೀಳಿಸಿದ ಬಳಿಕ ಇರಿದಿತ್ತು. 2016 ಜುಲೈ 11ಕ್ಕೆ ಕುನ್ನಾರುವಿನ ಸಿಪಿಎಂ ಕಾರ್ಯಕರ್ತ ಸಿ.ವಿ. ಧನರಾಜ್ ಕೊಲೆಕೃತ್ಯದ ಪ್ರಕರಣದಲ್ಲಿ ಬಿಜು ಹನ್ನೆರಡನೆ ಆರೋಪಿಯಾಗಿದ್ದರು.
Next Story