ತ್ರಿವಳಿ ತಲಾಕ್:ವಿಚಾರಣಾ ಪೀಠದಲ್ಲಿ ಮಹಿಳೆಯ ಅನುಪಸ್ಥಿತಿ ಪ್ರಶ್ನಿಸಿದ ಎನ್‌ಸಿಡಬ್ಲೂ ಅಧ್ಯಕ್ಷೆ

ಹೊಸದಿಲ್ಲಿ,ಮೇ 13: ತ್ರಿವಳಿ ತಲಾಕ್ ವಿಷಯದ ಕುರಿತು ವಿಚಾರಣೆ ನಡೆಸುತ್ತಿರುವ ಸರ್ವೋಚ್ಚ ನ್ಯಾಯಾಲಯದ ಪೀಠದಲ್ಲಿ ಮಹಿಳಾ ನ್ಯಾಯಾಧೀಶರ ಅನುಪಸ್ಥಿತಿಯನ್ನು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ಲಲಿತಾ ಕುಮಾರಮಂಗಳಂ ಅವರು ಶನಿವಾರ ಪ್ರಶ್ನಿಸಿದ್ದಾರೆ.
ಇಲ್ಲಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ತ್ರಿವಳಿ ತಲಾಕ್ ಕುರಿತು ವಿಚಾರಣೆಯ ಬಗ್ಗೆ ಕೇಳಿ ಬರುತ್ತಿರುವ ಗುಲ್ಲು ಮತ್ತು ಸರ್ವೋಚ್ಚ ನ್ಯಾಯಾಲಯದ ಪೀಠದಲ್ಲಿ ವಿವಿಧ ಧರ್ಮಗಳ ನ್ಯಾಯಾಧೀಶರು ಇರುವುದನ್ನು ಗಮನಿಸಿದ್ದೇನೆ. ಆದರೆ ಇಲ್ಲಿ ವಿವಾದವು ಧರ್ಮಕ್ಕೆ ಸಂಬಂಧಿಸಿದ್ದಲ್ಲ...ಅದು ಮಹಿಳೆಯರ ಹಕ್ಕುಗಳಿಗೆ ಮತ್ತು ಮಕ್ಕಳನ್ನೂ ಒಳಗೊಂಡಿರುವುದರಿಂದ ಮಾನವ ಹಕ್ಕುಗಳಿಗೆ ಸಂಬಂಧಿಸಿದೆ. ಪೀಠದಲ್ಲಿ ಓರ್ವ ಮಹಿಳಾ ನ್ಯಾಯಾಧಿಶರು ಅಗತ್ಯವಾಗಿ ಇರಬೇಕಾಗಿತ್ತು ಎಂದು ಹೇಳಿದರು.
ಯಾವುದೇ ನ್ಯಾಯಾಧೀಶರ ಕ್ಷಮತೆಯನ್ನು ತಾನು ಪ್ರಶ್ನಿಸುತ್ತಿಲ್ಲವಾದರೂ, ನ್ಯಾ.ಆರ್ ಭಾನುಮತಿಯವರು ಪೀಠದಲ್ಲಿರಬೇಕಾಗಿತ್ತು ಎಂದರು.
Next Story





