ಆರ್‌ಟಿಐ ಪ್ರಕರಣಗಳು ಬಾಕಿ:ಇನ್ನಷ್ಟು ಮಾಹಿತಿ ಆಯುಕ್ತರ ನೇಮಕಕ್ಕೆ ಆಗ್ರಹ

ಮುಂಬೈ,ಮೇ 13: ಈ ತಿಂಗಳ ಕೊನೆಯಲ್ಲಿ ಸೇವೆಯಿಂದ ನಿವೃತ್ತರಾಗುತ್ತಿರುವ ರಾಜ್ಯ ಮುಖ್ಯ ಮಾಹಿತಿ ಆಯುಕ್ತ ರತ್ನಾಕರ ಗಾಯಕ್ವಾಡ್ ಅವರ ಉತ್ತರಾಧಿಕಾರಿಯನ್ನು ತಕ್ಷಣವೇ ಪ್ರಕಟಿಸುವಂತೆ ಖ್ಯಾತ ಮಾಹಿತಿ ಹಕ್ಕು ಕಾರ್ಯಕರ್ತ ಶೈಲೇಶ್ ಗಾಂಧಿ ಅವರು ಮಹಾರಾಷ್ಟ್ರ ಸರಕಾರವನ್ನು ಆಗ್ರಹಿಸಿದ್ದಾರೆ.
ಅಲ್ಲದೆ ಬಾಕಿಯುಳಿದಿರುವ ಆರ್‌ಟಿಐ ಅರ್ಜಿಗಳ ವಿಲೇವಾರಿಗಾಗಿ ಈಗ ಇರುಏಳು ಮಾಹಿತಿ ಆಯುಕ್ತರ ಜೊತೆಗೆ ಇನ್ನೂ ಮೂವರು ಆಯುಕ್ತರನ್ನು ನೇಮಕಗೊಳಿ ಸುವಂತೆಯೂ ಮಾಜಿ ಕೇಂದ್ರ ಮಾಹಿತಿ ಆಯುಕ್ತ ಗಾಂಧಿ ಅವರು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಬರೆದಿರುವ ಪತ್ರದಲ್ಲಿ ಒತ್ತಾಯಿಸಿದ್ದಾರೆ.
2005ರಿಂದ ಕಾಲಕಾಲಕ್ಕೆ ಮಾಹಿತಿ ಆಯುಕ್ತರನ್ನು ನೇಮಕಗೊಳಿಸಿಲ್ಲ, ಇದು ಆರ್‌ಟಿಐ ಅರ್ಜಿಗಳು ಬಾಕಿಯುಳಿಯಲು ಕಾರಣವಾಗಿದೆ ಎಂದಿರುವ ಗಾಂಧಿ, ಹಾಲಿ ಮಹಾರಾಷ್ಟ್ರ ರಾಜ್ಯ ಮಾಹಿತಿ ಆಯೋಗದಲ್ಲಿ ಸುಮಾರು 40,000 ಪ್ರಕರಣಗಳು ಬಾಕಿಯಿವೆ ಎಂದು ಬೆಟ್ಟು ಮಾಡಿದ್ದಾರೆ.
Next Story





