ಮಲ್ಯ ಗಡಿಪಾರು ವಿಚಾರಣೆ ಜೂ. 13ಕ್ಕೆ ಮುಂದೂಡಿಕೆ

ಲಂಡನ್, ಮೇ 13: ಭಾರತದ ಬ್ಯಾಂಕ್‌ಗಳಿಗೆ 10,000 ಕೋಟಿ ರೂಪಾಯಿ ವಂಚಿಸಿ ಬ್ರಿಟನ್‌ಗೆ ಪರಾರಿಯಾಗಿರುವ ವಿಜಯ ಮಲ್ಯಾರನ್ನು ಗಡಿಪಾರು ಮಾಡುವುದಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯನ್ನು ಜೂನ್ 13ಕ್ಕೆ ಮೂಂದೂಡಲಾಗಿದೆ ಎಂದು ಬ್ರಿಟನ್‌ನ ಕ್ರೌನ್ ಪ್ರಾಸಿಕ್ಯೂಶನ್ ಸರ್ವಿಸ್ (ಸಿಪಿಎಸ್) ಹೇಳಿದೆ.
ಲಂಡನ್‌ನ ವೆಸ್ಟ್‌ಮಿನ್‌ಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ನಡೆಯಲಿರುವ ಮಲ್ಯರ ಗಡಿಪಾರು ಪ್ರಕರಣದ ವಿಚಾರಣೆಯಲ್ಲಿ ಭಾರತೀಯ ಅಧಿಕಾರಿಗಳ ಪರ ಸಿಪಿಎಸ್ ವಾದಿಸಲಿದೆ. ಈ ಮೊದಲು ವಿಚಾರಣೆಯನ್ನು ಮೇ 17ಕ್ಕೆ ನಿಗದಿಪಡಿಸಲಾಗಿತ್ತು.
ನಾಲ್ವರು ಸದಸ್ಯರ ಜಂಟಿ ಸಿಬಿಐ ಮತ್ತು ಅನುಷ್ಠಾನ ನಿರ್ದೇಶನಾಲಯ (ಇಡಿ) ತಂಡ ಈ ತಿಂಗಳ ಆರಂಭದಲ್ಲಿ ಲಂಡನ್‌ಗೆ ಆಗಮಿಸಿದೆ.
Next Story





