ಪಶ್ಚಿಮ ದಂಡೆಯಲ್ಲಿ ಸ್ಥಳೀಯ ಚುನಾವಣೆ
.jpg)
ರಮಲ್ಲಾ (ಪಶ್ಚಿಮ ದಂಡೆ/ಗಾಝಾ), ಮೇ 13: ಫೆಲೆಸ್ತೀನ್‌ನ ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಶನಿವಾರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಿತು. ಇದು ಹಲವು ವರ್ಷಗಳಲ್ಲಿ ನಡೆದ ಮೊದಲ ಪ್ರಜಾಸತ್ತಾತ್ಮಕ ಪ್ರಕ್ರಿಯೆಯಾಗಿದೆ.
ಚುನಾವಣೆಯನ್ನು ಪಶ್ಚಿಮದ ದೇಶಗಳ ಬೆಂಬಲ ಹೊಂದಿರುವ ಫೆಲೆಸ್ತೀನ್ ಅಧ್ಯಕ್ಷ ಮಹ್ಮೂದ್ ಅಬ್ಬಾಸ್ ಮತ್ತು ಅವರ ಫತಾ ಪಕ್ಷದ ಜನಪ್ರಿಯತೆಯ ಪರೀಕ್ಷೆ ಎಂಬುದಾಗಿ ಪರಿಗಣಿಸಲಾಗಿದೆ.
ಪಶ್ಚಿಮ ದಂಡೆಯ 145 ಸ್ಥಳೀಯ ಕೌನ್ಸಿಲರ್‌ಗಳನ್ನು ಆರಿಸಲು ಸುಮಾರು 8 ಲಕ್ಷ ಫೆಲೆಸ್ತೀನೀಯರು ಮತ ಚಲಾಯಿಸಿದರು. ಆದರೆ, ಗಾಝಾ ಪಟ್ಟಿಯಲ್ಲಿ ಚುನಾವಣೆ ನಡೆದಿಲ್ಲ.
Next Story





