ಪ್ರಮಥಾಗೆ 623 ಅಂಕ
s s l c r.jpg)
ಹೊನ್ನಾವರ, ಮೇ 13: ಪಟ್ಟಣದ ಮಾರ್ಥೋಮಾ ಶಾಲೆಯ ವಿದ್ಯಾರ್ಥಿನಿ ಪ್ರಮಥಾ ಜಿ. ಭಟ್ಟ ಎಸೆಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 623 ಅಂಕ (ಶೇ. 99.68) ಗಳಿಸಿ ರಾಜ್ಯಕ್ಕೆ ಮೂರನೆ ಸ್ಥಾನ ಪಡೆದಿದ್ದಾರೆ. ಹೊನ್ನಾವರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಜಿ.ಎನ್.ಭಟ್ಟ ಹಾಗೂ ಮಾರ್ಥೋಮಾ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಶಾಂತಿ ಭಟ್ಟ ಅವರ ಪುತ್ರಿಯಾಗಿರುವ ಪ್ರಮಥಾ ತಾಲೂಕಿನ ಮೇಲಿನ ಇಡಗುಂಜಿಯವಳು. ಇವಳ ಸಾಧನೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್.ಭಟ್ ಹಾಗೂ ಊರ ನಾಗರಿಕರು ಹರ್ಷ ವ್ಯಕ್ತಪಡಿಸಿದ್ದಾರೆ.
Next Story





