ಅಲ್ ಹಕ್ಕ್ ಫೌಂಡೇಶನ್ ವತಿಯಿಂದ ಹಿಜಾಮಾ ಚಿಕಿತ್ಸೆ
ಮಂಗಳೂರು, ಮೇ 13: ನಗರದ ಸ್ಟೇಟ್‍ಬ್ಯಾಂಕ್ ಸಮೀಪದಲ್ಲಿರುವ ಎಸ್.ಕೆ.ಎಸ್.ಎಂ. ಕಚೇರಿಯ ದಾರುಲ್‍ಖೈರ್ ಸಭಾಂಗಣದಲ್ಲಿ ಅಲ್ ಹಕ್ಕ್ ಫೌಂಡೇಶನ್ ವತಿಯಿಂದ ಹಿಜಾಮಾ ಚಿಕಿತ್ಸೆ ನಡೆಯಿತು.
ಬಂದರ್ ಠಾಣೆಯ ವೃತ್ತ ನಿರೀಕ್ಷಕ ಶಾಂತರಾಮ್ ಕುಂದರ್ ಕಾರ್ಯಕ್ರಮ ಉದ್ಘಾಟಿಸಿದರು.
ಡಾI ಝಾಯಿದ್ ಮಾತನಾಡಿ, ಇದು ಅನಾದಿಕಾಲದಿಂದ ನಡೆದುಕೊಂಡು ಬಂದಿರುವ ಒಂದು ಚಿಕಿತ್ಸಾ ಪದ್ಧತಿಯಾಗಿದೆ. ಹಿಜಾಮ ಮಾಡುವುದರಿಂದ ರಕ್ತ ಸಂಬಂಧಿ ರೋಗಿಗಳಿಗೆ ಪರಿಹಾರ ಸಾಧ್ಯ ಎಂದರು.
ಎಂ.ಜಿ ಮುಹಮ್ಮದ್, ಎಸ್.ಕೆ.ಎಸ್.ಎಂ. ಪ್ರಧಾನ ಕಾರ್ಯದರ್ಶಿ ಬಶೀರ್ ಅಹ್ಮದ್ ಶಾಲಿಮಾರ್, ಅಲ್ ಹಕ್ಕ್ ಫೌಂಡೇಶನ್ ಅಧ್ಯಕ್ಷ ಬಿ.ಎಸ್. ಇಮ್ತಿಯಾಝ್ ಉಪಸ್ಥಿತರಿದ್ದರು.
ಸಂಸ್ಥೆಯ ಸದಸ್ಯ ಮುಹಮ್ಮದ್ ಸಾಲಿಹ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಕುದ್ರೋಳಿ ವಂದಿಸಿದರು.
Next Story





