ಮ್ಯಾಡ್ರಿಡ್ ಓಪನ್: ನಡಾಲ್ ಸೆಮಿ ಫೈನಲ್‌ಗೆ
ಮ್ಯಾಡ್ರಿಡ್, ಮೇ 13: ಬೆಲ್ಜಿಯಂನ ಡೇವಿಡ್ ಗಫಿನ್‌ರನ್ನು 7-6(7/3), 6-2 ಸೆಟ್‌ಗಳ ಅಂತರದಿಂದ ಮಣಿಸಿದ ರಫೆಲ್ ನಡಾಲ್ ಮ್ಯಾಡ್ರಿಡ್ ಓಪನ್ ಟೆನಿಸ್ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ತಲುಪಿದ್ದಾರೆ.
ನಡಾಲ್ ಮುಂದಿನ ಸುತ್ತಿನಲ್ಲಿ ಸರ್ಬಿಯ ಆಟಗಾರ ನೊವಾಕ್ ಜೊಕೊವಿಕ್‌ರನ್ನು ಎದುರಿಸಲಿದ್ದಾರೆ. ನಡಾಲ್ ಮ್ಯಾಡ್ರಿಡ್ ಓಪನ್‌ನಲ್ಲಿ 50ನೆ ಬಾರಿ ಜೊಕೊವಿಕ್‌ರನ್ನು ಮುಖಾಮುಖಿಯಾಗಲಿದ್ದಾರೆ.
ಜಪಾನ್ ಆಟಗಾರ ಕೀ ನಿಶಿಕೊರಿ ಗಾಯದಿಂದ ಪಂದ್ಯದಿಂದ ಹಿಂದೆ ಸರಿದ ಕಾರಣ ಜೊಕೊವಿಕ್ ಕ್ವಾರ್ಟರ್‌ಫೈನಲ್‌ನಲ್ಲಿ ಒಂದು ಚೆಂಡು ಆಡದೇ ಸೆಮಿಫೈನಲ್‌ಗೆ ತಲುಪಿದರು.
ಜೊಕೊವಿಕ್ ಅವರು ನಡಾಲ್ ವಿರುದ್ಧ 26-23 ಹೆಡ್-ಟು-ಹೆಡ್ ದಾಖಲೆ ಹೊಂದಿದ್ದಾರೆ.
Next Story





