ಶಾಲಾ ಪೀಠೋಪಕರಣಗಳ ಸ್ಥಳಾಂತರಕ್ಕೆ ಖಂಡನೆ
ಸುಳ್ಯ, ಮೇ 13: ಭೂತಕಲ್ಲು ಪ್ರಾಥಮಿಕ ಶಾಲಾ ಪೀಠೋಪಕರಣಗಳನ್ನು ಸ್ಥಳಾಂತರಿಸಿದ ರೀತಿ ಖಂಡನೀಯ. ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅನುಸರಿಸಿದ್ದು ಅಮಾನವೀಯ ಎಂದು ಶಾಲಾ ಮಾಜಿ ಎಸ್‌ಡಿಎಂಸಿ ಸದಸ್ಯರು ಆರೋಪಿಸಿದ್ದಾರೆ.
ಈ ಬಗ್ಗೆ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಸದಸ್ಯ ಲೋಲಾಕ್ಷ ಮಾತನಾಡಿ, ಭೂತಕಲ್ಲು ಆಲೆಟ್ಟಿ ಪಂಚಾಯತ್ ಸದಸ್ಯ ಸುದರ್ಶನ ಪಾತಿಕಲ್ಲು ನೇತೃತ್ವದಲ್ಲಿ ಕೆಲವು ಮಂದಿಯ ತಂಡ ಏಕಾಏಕಿ ಶಾಲೆಯ ಪೀಠೋಪಕರಣಗಳನ್ನು ಕೊಂಡೊಯ್ದಿದ್ದಾರೆ. ಈ ಬಗ್ಗೆ ಸಂಬಂಧಿತ ಇಲಾಖೆ ಮತ್ತು ಜನಪ್ರತಿನಿಧಿಗಳಿಗೆ ದೂರು ನೀಡಿದರೂ ಸ್ಪಂದಿಸಿಲ್ಲ. ವಾರದೊಳಗೆ ಕ್ರಮ ಕೈಗೊಳ್ಳದಿದ್ದರೆ ಪಕ್ಷಾತೀತವಾಗಿ ಬಿಇಒ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಎಂದು ಅವರು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ವೆಂಕಟ್ರಮಣ ಗೌಡ, ಕುಸುಮಾಧರ ಬಿ.ಸಿ., ಯೋಗೇಶ್, ಮನ್ಮಥ ಕುಡೆಕಲ್ಲು ಉಪಸ್ಥಿತರಿದ್ದರು.
Next Story





