ಪ್ರಚೋದನಕಾರಿ ಹೇಳಿಕೆ: ಬಿಜೆಪಿ ಶಾಸಕ ರಾಜಾ ಸಿಂಗ್, ಡಿಜೆಎಸ್ ಮುಖ್ಯಸ್ಥ ಮಜೀದ್ ವಿರುದ್ಧ ಪ್ರಕರಣ ದಾಖಲು

ಹೈದರಾಬಾದ್, ಮೇ 13: ಸಾರ್ವಜನಿಕರಲ್ಲಿ ದ್ವೇಷಭಾವನೆಯನ್ನು ಮೂಡಿಸಲು ಯತ್ನಿಸಿದ ಆರೋಪದಲ್ಲಿ ಬಿಜೆಪಿ ಶಾಸಕ ರಾಜಾ ಸಿಂಗ್ ಹಾಗೂ ದರ್ಶಗಾ ಜಿಹಾದ್-ಒ-ಶಹಾದತ್ ಸಂಘಟನೆಯ ಮುಖ್ಯಸ್ಥ ಅಬ್ದುಲ್ ಮಜೀದ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ನ್ಯೂಸ್ ಚಾನಲೊಂದಕ್ಕೆ ಸಂದರ್ಶನ ನೀಡಿದ್ದ ವೇಳೆ ಹಳೆಯ ಹೈದರಾಬಾದ್ ನಗರ ಮಿನಿ ಪಾಕಿಸ್ತಾನ ಎಂಬುದಾಗಿ ರಾಜಾ ಸಿಂಗ್ ಹೇಳಿಕೆ ನೀಡಿದ್ದರು. ಇಷ್ಟೇ ಅಲ್ಲದೆ ಖಾಸಗಿ ಸೇನೆಯೊಂದನ್ನು ಕಟ್ಟುವುದಾಗಿ ಹಾಗೂ ಮಾರಕಾಸ್ತ್ರಗಳ ಬಗ್ಗೆ ಯುವಕರಿಗೆ ತರಬೇತಿ ನೀಡುವುದಾಗಿಯೂ ಹೇಳಿದ್ದರು.
ಮೇ 12ರಂದು ಮಜೀದ್ ಹಝ್ರತ್ ಉಜಾಲೆ ಶಾ ಈದ್ಗಾ ಮೈದಾನದಲ್ಲಿ ಉದ್ರೇಕಕಾರಿ ಭಾಷಣ ಮಾಡಿದ್ದರು ಎನ್ನಲಾಗಿದೆ.
Next Story