ಹರ್ಯಾಣದಲ್ಲಿ ಕಾಮುಕರ ಕೈಗೆ ಸಿಲುಕಿ ಇನ್ನೊಬ್ಬಳು ನಿರ್ಭಯ ಬಲಿ

ಚಂಡಿಗಢ, ಮೇ14: ದಿಲ್ಲಿಯಲ್ಲಿ ನಿರ್ಭಯ ಪ್ರಕರಣದಲ್ಲಿ ಅಪರಾಧಿಗಳಿಗೆ ಸುಪ್ರೀಂ ಕೋರ್ಟ್ ಗಲ್ಲಿ ಶಿಕ್ಷೆ ವಿಧಿಸಿ ಒಂದು ವಾರ ಕಳೆಯುವಷ್ಟರಲ್ಲಿ ಹರ್ಯಾಣದ ರೋಹ್ಟಕ್ ನಲ್ಲಿ ಇನ್ನೊಂದು ನಿರ್ಭಯ ಪ್ರಕರಣ ಬೆಳಕಿಗೆ ಬಂದಿದೆ.
ರೋಹ್ಟಕ್ ನಲ್ಲಿ ೨೩ರ ಹರೆಯದ ವಿಚ್ಛೇಧಿತ ಮಹಿಳೆಯೊಬ್ಬರ ನ್ನು ಅಪಹರಿಸಿ ಅತ್ಯಾಚಾರ ನಡೆಸಿ ಕೊಂದು ಹಾಕಿದ್ದಾರೆ. ಅಷ್ಟು ಮಾತ್ರವಲ್ಲದೆ ಆಕೆಯ ಖಾಸಗಿ ಭಾಗಗಳನ್ನು ಹರಿತವಾದ ಆಯುಧಗಳಿಂದ ಕತ್ತರಿಸಿ ಹಾಕಿದ್ದಾರೆ. ಎಲ್ಲವೂ ಮುಗಿದ ಬಳಿಕ ಮಹಿಳೆಯ ಗುರುತು ಸಿಗದಂತೆ ಮಾಡಲು ಆಕೆಯ ತಲೆಯ ಮೇಲೆ ಕಲ್ಲು ಎತ್ತಿ ಹಾಕಿದ್ದಾರೆ.
ರೋಹ್ಟಕ್ ನ ಕೈಗಾರಿಕಾ ಪ್ರದೇಶದಲ್ಲಿ ಪತ್ತೆಯಾದ ಮಹಿಳೆಯ ಶವ ಭಾಗಶ: ಕೊಳೆತು ಹೋಗಿದೆ. ಹೊಟ್ಟೆ, ಮುಖದ ಮಾಂಸವನ್ನು ಬೀದಿ ನಾಯಿಗಳು ತಿಂದು ಮುಗಿಸಿವೆ.
ಮಹಿಳೆಯ ಕೊಳೆತ ಶವವನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಈ ಸಂಬಂಧ ಇಬ್ಬರನ್ನು ಬಂಧಿಸಿದ್ದಾರೆ.ಓರ್ವ ಹತ್ಯೆಯಾದ ಮಹಿಳೆಯ ನಿವಾಸಿ ಸೋನಾಪತ್ ನ ಸುಮೀತ್ ಕುಮಾರ್ ಮತ್ತು ಆತನ ಸ್ನೇಹಿತ ವಿಕಾಸ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.ಇಬ್ಬರು ಮಹಿಳೆಯ ಮೇಲೆ ಅತ್ಯಾಚಾರ ನಡೆಸಿ ಕೊಂದು ಹಾಕಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.