ಲೈಂಗಿಕ ದೌರ್ಜನ್ಯ ಕಡಿಮೆ ಮಾಡಲು ವಿನೂತನ ಐಡಿಯಾ ಹೇಳಿದ ಸಚಿವ

ಆಲಪ್ಪುಝ,ಮೇ 14: ಕೇರಳದಲ್ಲಿ ಲೈಂಗಿಕ ದೌರ್ಜನ್ಯಗಳು ಹೆಚ್ಚುತ್ತಿವೆ ಎನ್ನುವ ಆಕ್ಷೇಪ ಬಲವಾಗಿ ಕೇಳಿಸುತ್ತಿದೆ. ಇದಕ್ಕೆ ಸಚಿವ ಜಿ.ಸುಧಾಕರನ್ ಸೂಚಿಸಿದ ಪರಿಹಾರವೊಂದು ಭಾರೀ ವಿವಾದ ಸೃಷ್ಟಿಸಿದೆ. ಸಚಿವರ ಪ್ರಕಾರ ಲೈಂಗಿಕ ದೌರ್ಜನ್ಯಗಳು ಇಲ್ಲದಾಗಬೇಕಿದ್ದರೆ ಸಮಾಜದಲ್ಲಿರುವ ಎಲ್ಲರೂ ಕೃಷಿ ಕೆಲಸದಲ್ಲಿ ತೊಡಗಿಸಿಕೊಳ್ಳುವುದೊಂದೇ ಪರಿಹಾರವಾಗಿದೆ. ದಾರಿಯುದ್ದಕ್ಕೂ ಫೋನ್‌ನಲ್ಲಿ ಮಾತಾಡುತ್ತಾ ತಿರುಗುವ ಅಭ್ಯಾಸವನ್ನು ಮಹಿಳೆಯರು ಬಿಡಬೇಕು. ಹೀಗೆಲ್ಲಾ ಸಚಿವರು ಮಹಿಳೆಯರಿಗೂ ಪುಕ್ಕಟೆ ಸಲಹೆ ನೀಡಿದ್ದಾರೆ. ಆಲಪ್ಪುಝದಲ್ಲಿ ನಡೆದ ಮಕ್ಕಳ ಅಭಿವೃದ್ಧಿ ಇಲಾಖೆಯ ಹೊಸ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತಾಡುತ್ತಿದ್ದರು.
ಅವರ ಸಂಶೋಧನೆಯಂತೆ ಲೈಂಗಿಕ ಕಿರುಕುಳದಿಂದ ಪಾರಾಗಲು ಕೃಷಿಯೇ ಉತ್ತಮ ಮಾರ್ಗವಾಗಿದೆ. ಕೃಷಿಕಾರ್ಯದಲ್ಲಿ ತೊಡಗಿಸಿಕೊಂಡರೆ ಯಾರಿಗೂ ಯಾವ ದೌರ್ಜನ್ಯವನ್ನು ಮಾಡಲುಸಾಧ್ಯವಿಲ್ಲ. ಕೆಲಸದಲ್ಲಿ ಮಗ್ನನಾದ ಈತನಿಗೆ ಕಿರುಕುಳ ನೀಡಲು ಎಲ್ಲಿ ಸಮಯವಿದೆ ಎಂದು ಸಚಿವರು ಪ್ರಶ್ನಿಸಿದ್ದಾರೆ. ಈ ಕೆಲಸವನ್ನು ಮಾತ್ರ ಸರಕಾರಅಥವಾ ಪೊಲೀಸರಿಂದ ಮಾಡಲು ಸಾಧ್ಯವಿಲ್ಲ. ಕೃಷಿಯನ್ನುಪ್ರೋತ್ಸಾಹಿಸಲು ಪಂಚಾಯತ್‌ಗಳುಮತ್ತು ನಗರಸಭೆಗಳು ಮುಂದೆ ಬರಬೇಕು. ಅವರು ಜನರ ನಡುವೆ ಹೋಗಿ ಏನು ಸಮಸ್ಯೆ ಎನ್ನುವುದನ್ನು ಅಧ್ಯಯನ ನಡೆಸಬೇಕು ಎಂದು ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಹಿಳೆಯರು ಕೂಡಾ ಬಿಡಬೇಕಾದ ವಿಷಯ ಬಹಳಷ್ಟಿದೆ. ಆದರೆ ಅದನ್ನು ನಾನು ಹೇಳುವುದಿಲ್ಲ. ವಿಧಾನಸಭೆಯಲ್ಲಿ ಅದಕ್ಕೆ ಉತ್ತರ ಕೊಡಲು ನನ್ನಿಂದ ಸಾಧ್ಯವಿಲ್ಲ ಎಂದು ಸಚಿವರು ಹೇಳಿದ್ದಾರೆ. ಮಾಧ್ಯಮಗಳನ್ನು ಕೂಡಾ ತರಾಟೆಗೆತ್ತಿಕೊಂಡ ಸಚಿವರು, ಮಕ್ಕಳು, ಮಹಿಳೆಯರು ಕಿರುಕುಳಕ್ಕೊಳಗಾಗುವುದನ್ನು ಸುದ್ದಿಗಳಿಗೆ ಮಾಧ್ಯಮಗಳು ಪ್ರಾಮುಖ್ಯತೆ ನೀಡುತ್ತವೆ.ಆದರೆ ಅದರ ಕಾರಣಗಳು ಪತ್ತೆಹಚ್ಚಲು ಅದಕ್ಕೆ ಪುರಸೊತ್ತಿಲ್ಲ ಎಂದು ಟೀಕಿಸಿದ್ದಾರೆ.