ಈಜು ತರಬೇತಿಗೆ ಬಂದ ಎಂಟು ವರ್ಷದ ಬಾಲಕಿ ತಂದೆ ತಾಯಿ ಮುಂದೆಯೇ ದಾರುಣ ಅಂತ್ಯ
ಚೆನ್ನೈ,ಮೇ 14: ಈಜು ತರಬೇತಿಗೆ ಬಂದ ಎಂಟು ವರ್ಷದ ಹೆಣ್ಣುಮಗು ಮೊದಲದಿವಸ ತಂದೆತಾಯಿ ಮುಂದೆಯೇ ಉಸಿರುಗಟ್ಟಿ ಮೃತಪಟ್ಟ ದಾರುಣ ಘಟನೆ ನಡೆದಿದೆ. ಚೆನ್ನೈ ಮುಗಪ್ಪೈಯರ್ ಈಸ್ಟ್‌ನಲ್ಲಿ ವಾಸವಿರುವ ಸಿನೆಮಾ ಸಹ ನಿರ್ದೇಶಕ ತೃಶೂರ್‌ನ ಪಿ.ಜಿ. ಬಿಜು ಮತ್ತು ಜೆಸಿ (ಸಾಫ್ಟ್‌ವೇರ್ ಇಂಜಿನಿಯರ್) ದಂಪತಿ ಪುತ್ರಿ ಆಂಡ್ರಿಯಾ ಮೃತಪಟ್ಟಿರುವ ಬಾಲಕಿಯಾಗಿದ್ದಾಳೆ.
ಮುಗಪ್ಪೈಯರ್ ವೆಸ್ಟ್ ಡಾನ್ ಸ್ಕೂಲ್‌ನ ಮೂರನೆ ತರಗತಿ ವಿದ್ಯಾರ್ಥಿನಿಯಾಗಿದ್ದಾಳೆ. ಮುಗಪ್ಪೈಯರ್ ವಿವಿ ಸ್ವಿಮ್ಮಿಂಗ್ ಅಕಾಡಮಿಯಲ್ಲಿ ಶನಿವಾರ ಬೆಳಗ್ಗೆ 7:30ಕ್ಕೆ ಈ ದಾರುಣ ಘಟನೆ ನಡೆದಿದೆ.
ತಂದೆ, ತಾಯಿ ಉಪಸ್ಥಿತಿಯಲ್ಲಿ ಈಜು ತರಬೇತಿದಾರನ ಸೂಚನೆಯಂತೆ ಈಜುಕೊಳಕ್ಕೆ ಇಳಿದ ಮಗು ನೀರಿನಲ್ಲಿ ಮುಳುಗಿದ್ದಾಳೆ. ಭಾರೀ ಪ್ರಮಾಣದ ನೀರು ಹೊಟ್ಟೆಗೆ ಪ್ರವೇಶಿಸಿದ್ದರಿಂದ ಮಗುವಿಗೆ ಉಸಿರಾಡಲು ಸಾಧ್ಯವಾಗಲಿಲ್ಲ. ತಕ್ಷಣ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾದರೂ ಮಗು ಮೃತಪಟ್ಟಿದೆ. ಮುಗಪ್ಪೈಯರ್ ಪೊಲೀಸರು ತರಬೇತಿದಾರರ ನಿರ್ಲಕ್ಷ್ಯದ ವಿರುದ್ಧ ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
Next Story