ಕಾಶ್ಮೀರ ಪೊಲೀಸ್ ಮುಖ್ಯಸ್ಥರ ಬದಲಾವಣೆ

ಶ್ರೀನಗರ, ಮೇ 14: ಕಾಶ್ಮೀರದಾದ್ಯಂತ ಉಗ್ರರ ಹಿಂಸಾಚಾರ ಮತ್ತು ವಿದ್ಯಾರ್ಥಿಗಳ ಪ್ರತಿಭಟನೆ ಪ್ರಕರಣ ಹೆಚ್ಚುತ್ತಿರುವ ಮಧ್ಯೆಯೇ ರಾಜ್ಯ ಸರಕಾರ ಕಾಶ್ಮೀರದ ಐಜಿಪಿ(ಪೊಲೀಸ್ ಮಹಾನಿರೀಕ್ಷಕ)ಯನ್ನು ಬದಲಾಯಿಸಿದೆ .
ಹಾಲಿ ಐಜಿಪಿ ಮುನೀರ್ ಅಹ್ಮದ್‌ಖಾನ್‌ರನ್ನು ವರ್ಗಾಯಿಸಲಾಗಿದ್ದು ಅವರ ಸ್ಥಾನದಲ್ಲಿ ಸಯ್ಯದ್ ಜಾವೈದ್ ಮುಜ್ತಬ ಗಿಲಾನಿಯವರನ್ನು ನೇಮಿಸಲಾಗಿದೆ. ಈ ಹಿಂದೆ ಕಾಶ್ಮೀರದ ಐಜಿಪಿಯಾಗಿ ಕಾರ್ಯನಿರ್ವಹಿಸಿದ್ದ ಗಿಲಾನಿಯವರನ್ನು 2015ರ ಮಾರ್ಚ್ 15ರಂದು ವರ್ಗಾಯಿಸಿ ಗುಪ್ತಚರ ವಿಭಾಗದ ನಿರ್ದೇಶಕರನ್ನಾಗಿ ನೇಮಿಸಲಾಗಿತ್ತು.
ಕಾಶ್ಮೀರದಲ್ಲಿ ಹೆಚ್ಚುತ್ತಿರುವ ಭಯೋತ್ಪಾದಕರ ಚಟುವಟಿಕೆ ಮತ್ತು ವಿದ್ಯಾರ್ಥಿಗಳ ಪ್ರತಿಭಟನೆಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿರುವ ಮಧ್ಯೆ ಸರಕಾರ ಈ ಪ್ರದೇಶದ ಪೊಲೀಸ್ ವರಿಷ್ಠರನ್ನು ಬದಲಿಸಿರುವುದು ಗಮನಾರ್ಹವಾಗಿದೆ.
Next Story





