Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಎಸೆಸೆಲ್ಸಿ ಫಲಿತಾಂಶ: ಜಿಲ್ಲೆಯ 16...

ಎಸೆಸೆಲ್ಸಿ ಫಲಿತಾಂಶ: ಜಿಲ್ಲೆಯ 16 ಶಾಲೆಗಳಿಗೆ ಶೇ.100, ಕನಿಷ್ಟ ಶೇ.37

ವಾರ್ತಾಭಾರತಿವಾರ್ತಾಭಾರತಿ14 May 2017 9:02 PM IST
share
ಎಸೆಸೆಲ್ಸಿ ಫಲಿತಾಂಶ: ಜಿಲ್ಲೆಯ 16 ಶಾಲೆಗಳಿಗೆ ಶೇ.100, ಕನಿಷ್ಟ ಶೇ.37

ಉಡುಪಿ, ಮೇ 14: ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆಯ ಒಟ್ಟು 16 ಪ್ರೌಢ ಶಾಲೆಗಳು ಶೇ.100 ಫಲಿತಾಂಶ ದಾಖಲಿಸಿವೆ. ಕಳೆದ ವರ್ಷ 35, 2015ರಲ್ಲಿ 70, 2014ರಲ್ಲಿ 36 ಹಾಗೂ 2013ರಲ್ಲಿ 55 ಪ್ರೌಢ ಶಾಲೆಗಳು ಈ ಸಾಧನೆ ಮಾಡಿದ್ದವು.

ಜಿಲ್ಲೆಯಲ್ಲಿ ಕನಿಷ್ಠ ಫಲಿತಾಂಶ ದಾಖಲಾಗಿರುವುದು ಮಲ್ಪೆಯ ಸರಕಾರಿ ಪ್ರೌಢ ಶಾಲೆಯಲ್ಲಿ. ಇಲ್ಲಿ ಶೇ.37ರಷ್ಟು ಫಲಿತಾಂಶ ಬಂದಿದೆ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ದಿವಾಕರ ಶೆಟ್ಟಿ ಎಚ್. ಪತ್ರಿಕೆಗೆ ತಿಳಿಸಿದ್ದಾರೆ.

ಕಳೆದ ವರ್ಷ ಪಡುಬಿದ್ರೆ ಸರಕಾರಿ ಪದವಿ ಪೂರ್ವ ಕಾಲೇಜು ಶೇ.48 ಫಲಿತಾಂಶ ಪಡೆದಿದ್ದೇ ಕನಿಷ್ಠ ಆಗಿತ್ತು. ಈ ಬಾರಿ 2 ಸರಕಾರಿ, 1 ಅನುದಾನಿತ ಹಾಗೂ 13 ಅನುದಾನ ರಹಿತ ಶಾಲೆಗಳು ಶೇ.100 ಫಲಿತಾಂಶ ದಾಖಲಿಸಿವೆ. ಅವುಗಳೆಂದರೆ ಸರಕಾರಿ: ಹರ್ಲಾಡಿ ರಘುವೀರ ಎ.ಶೆಟ್ಟಿ ಸರಕಾರಿ ಪ್ರೌಢ ಶಾಲೆ, ನಲ್ಲೂರು ಕಾರ್ಕಳ (26 ವಿದ್ಯಾರ್ಥಿಗಳು), ಗುಂಡ್ಮಿ ಸರಕಾರಿ ಪ್ರೌಢ ಶಾಲೆ ಗುಂಡ್ಮಿ (8). ಅನುದಾನಿತ: ಶ್ರೀವಾಣಿ ಪ್ರೌಢ ಶಾಲೆ ನಡೂರು (24).

ಅನುದಾನ ರಹಿತ: ಶ್ರೀ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಉಪ್ಪುಂದ (11) ಎಸ್‌ವಿಎಸ್ ಆಂಗ್ಲ ಮಾ.ಪ್ರೌಢ ಶಾಲೆ ಗಂಗೊಳ್ಳಿ (26), ಕ್ರೈಸ್ಟ್‌ಕಿಂಗ್ ಆಂಗ್ಲ ಮಾ.ಶಾಲೆ ಕಾರ್ಕಳ(82), ಕೆಎಂಇಎಸ್ ಶಾಲೆ ಕುಕ್ಕುಂದೂರು (55), ಜ್ಞಾನಸುಧಾ ಆಂಗ್ಲ ಮಾ.ಶಾಲೆ ಕುಕ್ಕುಂದೂರು (100), ಲಿಟ್ಲ್‌ಫ್ಲವರ್ ಆ.ಮಾ.ಪ್ರೌ.ಶಾಲೆ ರಂಗನಫಲ್ಕೆ ಕಾರ್ಕಳ (19), ಸೈಂಟ್ ಅಂತೋನಿ ಆ.ಮಾ.ಶಾಲೆ ಪಾಂಡೇಶ್ವರ ಸಾಸ್ತಾನ (27), ವಿವೇಕ ಆ.ಮಾ. ಶಾಲೆ ಕೋಟ (107), ಮಹಾಲಕ್ಷ್ಮಿ ಆ.ಮಾ.ಶಾಲೆ ಉಚ್ಚಿಲ (69), ಪೂರ್ಣಪ್ರಜ್ಞ ಆ.ಮಾ.ಶಾಲೆ ಅದಮಾರು (37), ಸಾಗರ ವಿದ್ಯಾ ಮಂದಿರ ಪ್ರೌ.ಶಾಲೆ ಪಡುಬಿದ್ರಿ (38), ನಾರಾಯಣಗುರು ಆ.ಮಾ.ಶಾಲೆ ಮಲ್ಪೆ (61), ಸೈಂಟ್ ಲಾರೆನ್ಸ್ ಆ.ಮಾ.ಶಾಲೆ ಮೂಡುಬೆಳ್ಳೆ (29).
 ಈ ಬಾರಿ ಜಿಲ್ಲೆಯಿಂದ 14,266 ಮಂದಿ ರೆಗ್ಯುಲರ್ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಇವರಲ್ಲಿ 12,016 ಮಂದಿ ತೇರ್ಗಡೆಗೊಂಡು ಶೇ.84.23 ಉತ್ತೀರ್ಣತೆ ದಾಖಲಾಗಿದೆ. ಇವರಲ್ಲಿ ಬಾಲಕರ ತೇರ್ಗಡೆ ಶೇ.80.30 ಆಗಿದ್ದರೆ ಬಾಲಕಿಯರದ್ದು ಶೇ.88.15 ಆಗಿದೆ.

ರೆಗ್ಯುಲರ್ ಪುನರಾವರ್ತಿತ 772 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇವರಲ್ಲಿ 177 ಮಂದಿ ತೇರ್ಗಡೆಗೊಂಡು ಶೇ.22.93 ಹಾಗೂ 362 ಖಾಸಗಿ ಅಭ್ಯರ್ಥಿಗಳು ಪರೀಕ್ಷೆ ಬರೆದು 28 ಮಂದಿ ತೇರ್ಗಡೆಗೊಂಡು ಶೇ.7.73 ಫಲಿತಾಂಶ ದಾಖಲಾಗಿದೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ 8063 ಬಾಲಕರು, 7440 ಬಾಲಕಿಯರು ಸೇರಿದಂತೆ 15,533 ಮಂದಿ ಈ ಬಾರಿ ಪರೀಕ್ಷೆ ಬರೆದಿದ್ದು, ಇವರಲ್ಲಿ 5875 ಬಾಲಕರು, 6364 ಬಾಲಕಿಯರು ಸೇರಿದಂತೆ 12,239 ಮಂದಿ ತೇರ್ಗಡೆಗೊಂಡು ಶೇ.78.79 ಫಲಿತಾಂಶ ದಾಖಲಾಗಿದೆ.

 ಸರಕಾರಿ ಪ್ರೌಢ ಶಾಲೆಗಳ 6535 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಇವರಲ್ಲಿ 5238 ಮಂದಿ ತೇರ್ಗಡೆಗೊಂಡು ಶೇ.80.84 ಫಲಿತಾಂಶ ಬಂದಿದ್ದರೆ, ಅನುದಾನಿತ ಶಾಲೆಗಳಿಂದ 3894 ಮಂದಿಯಲ್ಲಿ 3196 ಮಂದಿ ಉತ್ತೀರ್ಣರಾಗಿ ಶೇ. 82.07 ಹಾಗೂ ಅನುದಾನ ರಹಿತ ಶಾಲೆಗಳ 3837 ಮಂದಿ ವಿದ್ಯಾರ್ಥಿಗಳಲ್ಲಿ 3537 ಮಂದಿ ಪಾಸಾಗಿ 92.18 ಫಲಿತಾಂಶ ಬಂದಿದೆ.

ಪ.ಜಾತಿ,ಪ.ಪಂಗಡದ ಸಾಧನೆ: ಇನ್ನು ಪರಿಶಿಷ್ಟ ಜಾತಿಯ 1095 ಮಂದಿಯಲ್ಲಿ 782 (ಶೇ.71.42), ಪರಿಶಿಷ್ಟ ಪಂಗಡದ 733 ವಿದ್ಯಾರ್ಥಿಗಳಲ್ಲಿ 559 (ಶೇ.76.26) ಮಂದಿ ತೇರ್ಗಡೆಗೊಂಡಿದ್ದಾರೆ. ಆದರೆ ವೈಯಕ್ತಿಕವಾಗಿ ಈ ಮಕ್ಕಳು ಅತ್ಯುತ್ತಮ ಸಾಧನೆ ತೋರಿದ್ದಾರೆ. ಪ.ಜಾತಿಯಲ್ಲಿ ಹನೇಹಳ್ಳಿ ಬಾರಕೂರಿನ ಸ್ನೇಹ (615), ಬ್ರಹ್ಮಾವರದ ಸುಹಾಸ್ ಆರ್.ಕೆ. (603), ಬೈಂದೂರಿನ ಇಂಚರ ಕೆ. (582), ಉಡುಪಿ ಹನುಮಂತನಗರದ ಗೌತಮ್ (582), ಏಣಗುಡ್ಡೆ ಕಟಪಾಡಿಯ ಬಿ.ಶ್ರೇಯಾಂಕ್‌ಶಂಕರ್ (580) ಆಂಗ್ಲ ಮಾಧ್ಯಮದಲ್ಲಿ ಒಳ್ಳೆ ಸಾಧನೆ ಮಾಡಿದ್ದಾರೆ ಎಂದು ದಿವಾಕರ ಶೆಟ್ಟಿ ತಿಳಿಸಿದರು.

ಕನ್ನಡ ಮಾಧ್ಯಮದಲ್ಲಿ ಶಿರ್ವ ಹಿಂದು ಜೂ.ಕಾಲೇಜಿನ ಮಹೇಶ್ ಟಿ. (592), ಹೊಸೂರು ಮುಕಾಂಬಿಕಾ ಟೆಂಪಲ್ ಹೈಸ್ಕೂಲ್‌ನ ಸೃಜನ್ (590), ಕೋಟೇಶ್ವರ ಸ.ಪ.ಪೂ.ಕಾಲೇಜಿನ ರಕ್ಷಿತಾ (589), ಬ್ರಹ್ಮಾವರ ನಿರ್ಮಲ ಹೈಸ್ಕೂಲ್‌ನ ಶ್ರೀವತ್ಸಾ (589), ಕುಂದಾಪುರ ಸೈಂಟ್ ಜೋಸೆಫ್ ಹೈಸ್ಕೂಲ್‌ನ ಪೂಜಾ (587) ಅಂಕಗಳನ್ನು ಗಳಿಸಿದ್ದಾರೆ.

ಇನ್ನು ಪರಿಶಿಷ್ಟ ಪಂಗಡದ ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳಲ್ಲಿ ಕುಂಜಿಬೆಟ್ಟು ಟಿ.ಎ.ಪೈ ಆ.ಮಾ.ಶಾಲೆಯ ವಿಶ್ರುತ್ ಕುಮಾರ್(616), ಕಲ್ಯಾಣಪುರ ವೌಂಟ್‌ರೋಸರಿಯ ಸುಶ್ಮಿತಾ (604), ಕುಂದಾಪುರ ಸ.ಪ.ಪೂ.ಕಾಲೇಜಿನ ತೇಜಸ್ವಿ ಭಾಸ್ಕರ ನಾಯ್ಕಿ (600), ಉಡುಪಿ ಬಾಲಕಿಯರ ಸರಕಾರಿ ಪ.ಪೂ.ಕಾಲೇಜಿನ ಚೈತ್ರ (599),ಮಹಾಲಕ್ಷ್ಮಿ ಆ.ಮಾ.ಪ್ರೌ.ಶಾಲೆಯ ಅಂಕಿತ ಎಂ.(590) ಅತ್ಯುತ್ತಮ ಸಾಧನೆ ತೋರಿದ್ದಾರೆ.

 ಕನ್ನಡ ಮಾಧ್ಯಮದಲ್ಲಿ ಆದಿ ಉಡುಪಿ ಪ್ರೌಡ ಶಾಲೆಯ ಸಾವಿತ್ರಿ ಮಾರುತಿ (585), ಆವರ್ಸೆ ಸ.ಪ್ರೌಢ ಶಾಲೆಯ ಪದ್ಮಜಾ (584), ಸಿದ್ಧಾಪುರ ಸ.ಪ್ರೌ. ಶಾಲೆಯ ಸುರೇಶ್ (583), ಪೆರ್ವಾಜೆ ಸುಂದರ ಪುರಾಣಿಕ್ ಸರಕಾರಿ ಪ್ರೌ.ಶಾಲೆಯ ವೀಣಾ (576) ಉತ್ತಮ ಸಾಧನೆ ತೋರಿದ್ದಾರೆ. ವಲಯವಾರು ಫಲಿತಾಂಶವನ್ನು ಗಣನೆಗೆ ತೆಗೆದುಕೊಂಡಾಗ ಈ ಬಾರಿ ಕುಂದಾಪುರ ವಲಯ ಉಳಿದೆಲ್ಲವನ್ನು ಹಿಂದಿಕ್ಕಿ ಅಗ್ರಸ್ಥಾನದಲ್ಲಿದೆ.

ಇಲ್ಲಿ ಪರೀಕ್ಷೆ ಬರೆದ ಶೇ.86.37 ಮಂದಿ (2488ರಲ್ಲಿ 2149ಮಂದಿ) ತೇರ್ಗಡೆ ಗೊಂಡಿದ್ದರೆ, ಬ್ರಹ್ಮಾವರ ವಲಯ ಶೇ.85.99(3027-2603), ಕಾರ್ಕಳ ವಲಯ ಶೇ.85.24(2846-2426), ಉಡುಪಿ ವಲಯ ಶೇ. 84.13 (3673-3090) ಹಾಗೂ ಬೈಂದೂರು ವಲಯ ಶೇ.78.32 (2232-1748) ಫಲಿತಾಂಶಗಳನ್ನು ದಾಖಲಿಸಿವೆ.

ವಿಷಯವಾರು: ಉಡುಪಿ ಜಿಲ್ಲೆಯಲ್ಲಿ ವಿಷಯವಾರು ವಿದ್ಯಾರ್ಥಿಗಳ ತೇರ್ಗಡೆಯ ವಿವರ ಹೀಗಿದೆ. ಮೊದಲ ಭಾಷೆ: 14,263ರಲ್ಲಿ 13,736 (ಶೇ.96.31) ಮಂದಿ ತೇರ್ಗಡೆ, ದ್ವಿತೀಯ ಭಾಷೆ: 14,256-13035 (ಶೇ.91.44), ತೃತೀಯ ಭಾಷೆ: 14,255-13,059 (ಶೇ.91.61), ಗಣಿತ: 14,266-12715(ಶೇ.89.13), ವಿಜ್ಞಾನ: 14,266- 13,386 (ಶೇ.93.83), ಸಮಾಜ ವಿಜ್ಞಾನ: 14,266-13,521 (ಶೇ.94.78).

ಶ್ರೇಣಿವಾರು ಉತ್ತೀರ್ಣತೆ
   

ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ಶ್ರೇಣಿವಾರು ಉತ್ತೀರ್ಣತೆಯ ವಿವರ ಹೀಗಿದೆ. ಎ+ (90ರಿಂದ 100ಅಂಕ)-1,304 ಮಂದಿ, ಎ(80ರಿಂದ 89)-2400, ಬಿ+ (70-79)-2972, ಬಿ(60-69)- 3133, ಸಿ+(50-59)-1931, ಸಿ(35-50)-276.

ಉಡುಪಿ ಜಿಲೆಯಲ್ಲಿ ಕೇವಲ 276 ಮಂದಿ ವಿದ್ಯಾರ್ಥಿಗಳು ಮಾತ್ರ ಸಿ ದರ್ಜೆಯಲ್ಲಿ ತೇರ್ಗಡೆಗೊಂಡಿರುವುದರಿಂದ ಮಕ್ಕಳ ಕಲಿಕೆ ಮಟ್ಟದಲ್ಲಿ ಏರಿಕೆ ಯಾಗಿರುವುದು ಸ್ಪಷ್ಟವಾಗುತ್ತದೆ. ಜಿಲ್ಲೆಯ ಶೇ.60ಕ್ಕೂ ಅಧಿಕ ವಿದ್ಯಾರ್ಥಿಗಳು ಬಿ+ಗಿಂತ ಮೇಲಿನ ದರ್ಜೆಯಲ್ಲಿ ತೇರ್ಗಡೆಗೊಂಡಿದ್ದಾರೆ.

ನಗರ ಪ್ರದೇಶದ ವಿದ್ಯಾರ್ಥಿಗಳ ಮೇಲುಗೈ

ಜಿಲ್ಲೆಯಲ್ಲಿ ಈ ಬಾರಿ ನಗರ ಪ್ರದೇಶದ ವಿದ್ಯಾರ್ಥಿಗಳೇ ಮೇಲುಗೈ ಸಾಧಿಸಿದ್ದಾರೆ. ಪರೀಕ್ಷೆ ಬರೆದ 3060 ವಿದ್ಯಾರ್ಥಿಗಳಲ್ಲಿ 2676 ಮಂದಿ ಉತ್ತೀರ್ಣರಾಗಿ ಶೇ.87.45 ಫಲಿತಾಂಶ ಬಂದಿದ್ದರೆ, ಗ್ರಾಮೀಣ ಪ್ರದೇಶದಲ್ಲಿ ಪರೀಕ್ಷೆ ಬರೆದ 11,206 ವಿದ್ಯಾರ್ಥಿಗಳಲ್ಲಿ 9340 ಮಂದಿ ತೇರ್ಗಡೆಗೊಂಡ ಶೇ.83.35 ಸಾಧನೆ ಮಾಡಲಾಗಿದೆ.

ಇನ್ನು ಆಂಗ್ಲ ಮಾಧ್ಯಮದ 5937 ವಿದ್ಯಾರ್ಥಿಗಳಲ್ಲಿ 5563 ಮಂದಿ ತೇರ್ಗಡೆಗೊಂಡು ಶೇ.93.70 ಹಾಗೂ ಕನ್ನಡ ಮಾಧ್ಯಮದ 8329 ವಿದ್ಯಾರ್ಥಿಗಳಲ್ಲಿ 6453 ಮಂದಿ ತೇರ್ಗಡೆಗೊಂಡು ಶೇ.77.48 ಫಲಿತಾಂಶ ದಾಖಲಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X