ಡೆಹ್ರಾಡೂನ್‌ನಲ್ಲಿ ಬಹಿರಂಗ ಮಾಂಸ ಮಾರಾಟಕ್ಕೆ ನಿಷೇಧ

ಡೆಹ್ರಾಡೂನ್,ಮೇ 14: ಡೆಹ್ರಾಡೂನ್ ನಗರದಲ್ಲಿ ಮಾಂಸ ಮಾರಾಟದ ಅಂಗಡಿ ಗಳು ಪರವಾನಿಗೆಯನ್ನು ಹೊಂದಿದ್ದರೂ ಬಹಿರಂಗವಾಗಿ ಮಾಂಸ ಮಾರಾಟ ಮಾಡುವು ದನ್ನು ನಿಷೇಧಿಸಲಾಗುವುದು ಎಂದು ರಾಜ್ಯದ ನಗರಾಭಿವೃದ್ಧಿ ಸಚಿವ ಮದನ ಕೌಶಿಕ್ ಅವರು ರವಿವಾರ ಇಲ್ಲಿ ಸ್ಥಳೀಯ ವ್ಯಾಪಾರಿಗಳ ಸಂಘದೊಂದಿಗೆ ಮಾತುಕತೆಯ ಬಳಿಕ ಪ್ರಕಟಿಸಿದರು.
ನಿಯಮದಂತೆ ಪರವಾನಿಗೆ ಹೊಂದಿರುವ ಅಂಗಡಿಗಳು ಮಾಂಸವನ್ನು ಬಹಿರಂಗವಾಗಿ ಮಾರಾಟಕ್ಕಿಡುವಂತಿಲ್ಲ ಮತ್ತು ಅವು ತಮ್ಮ ವ್ಯವಹಾರವನ್ನು ಮುಚ್ಚಿದ ಸ್ಥಳದಲ್ಲಿ ನಡೆಸಬೇಕು ಎಂದು ತಿಳಿಸಿದರು.
ಈ ಬಗ್ಗೆ ಸಾರ್ವಜನಿಕ ಅರಿವು ಅಭಿಯಾನ ನಡೆಸುವಂತೆ ಮತ್ತು ಬಹಿರಂಗವಾಗಿ ಮಾಂಸ ಮಾರಾಟ ಮಾಡದಂತೆ ವ್ಯಾಪಾರಿಗಳಿಗೆ ಮಾಹಿತಿ ನೀಡುವಂತೆ ಅವರು ಡೆಹ್ರಾಡೂನ್ ಮಹಾನಗರ ಪಾಲಿಕೆ ಮತ್ತು ಇತರ ಇಲಾಖಾ ಅಧಿಕಾರಿಗಳಿಗೆ ನಿರ್ದೇಶ ನೀಡಿದರು.
ಬಹಿರಂಗವಾಗಿ ಮಾಂಸ ಮಾರಾಟವನ್ನು ಮುಂದುವರಿಸಲು ಬಯಸುವ ವ್ಯಾಪಾರಿಗಳಿಗೆ ಪ್ರತ್ಯೇಕ ಸ್ಥಳವನ್ನು ಒದಗಿಸುವಂತೆಯೂ ಅವರು ಅಧಿಕಾರಿಗಳಿಗೆ ಆದೇಶಿಸಿದರು.
ಗಂಗಾ ನದಿಯುದ್ದಕ್ಕೂ ಇರುವ ಮಾಂಸದಂಗಡಿಗಳ್ನು ಮುಚ್ಚುವಂತೆ ರಾಜ್ಯದ ಬಿಜೆಪಿ ನೇತೃತ್ವದ ಸರಕಾರವು ಈ ಹಿಂದೆ ಆದೇಶಿಸಿತ್ತು. ರಾಜ್ಯಾದ್ಯಂತ ಅಕ್ರಮ ಕಸಾಯಿಖಾನೆಗಳ ಮೇಲೂ ಅದು ದಾಳಿ ನಡೆಸಿತ್ತು.







