ನಾಪತ್ತೆ ಪ್ರಕರಣ: ಕೊಲೆ ಶಂಕೆ ವ್ಯಕ್ತಪಡಿಸಿದ ಪೋಷಕರು
ದಾವಣಗೆರೆ, ಮೇ 14: ತಾಲೂಕಿನ ಗುಡ್ಡದಹಟ್ಟಿ ಗ್ರಾಮ ದಿಂದ ಕಾಣೆಯಾಗಿರುವ ತಮ್ಮ ಮಗಳು ಹಾಗೂ ಮೊಮ್ಮ ಗಳು ಕೊಲೆಯಾಗಿರುವ ಶಂಕೆ ಇದೆ ಎಂದು ಪೋಷಕರು ಸಂಶಯ ವ್ಯಕ್ತಪಡಿಸಿದ್ದಾರೆ.
ರವಿವಾರ ಸುದ್ದಿಗೋಷ್ಠಿಯಲ್ಲಿ ಮಹಿಳೆಯ ತಂದೆ ಮಂಜಾನಾಯ್ಕ ಮಾತನಾಡಿ, ತನ್ನ ಎರಡನೆ ಮಗಳಾದ ಶೃತಿಬಾಯಿಯನ್ನು ಗುಡ್ಡದಹಟ್ಟಿ ಗ್ರಾಮದ ವೆಂಕಟೇಶನಾಯ್ಕ ಎಂಬವರಿಗೆ ಮದುವೆ ಮಾಡಿಕೊಟ್ಟಿದ್ದು, 3 ಹೆಣ್ಣು ಮಕ್ಕಳಿದ್ದಾರೆ.
ಆಕೆಯ ಗಂಡ ದಿನವೂ ಕುಡಿದು ಗಲಾಟೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಎ.21ರಂದು ಶೃತಿಬಾಯಿ, ತನ್ನ ಕೊನೆಯ ಮಗಳು ಸಿಂಧೂಬಾಯಿ ಜೊತೆಗೆ ಕಾಣೆಯಾಗಿದ್ದಾಳೆ ಎನ್ನಲಾಗಿದೆ.
ತನ್ನ ಮಗಳು ಹಾಗೂ ಮೊಮ್ಮಗಳ ಪತ್ತೆ ಬಗ್ಗೆ ಗಂಡನ ಮನೆಯವರು ನಿರ್ಲಕ್ಷ್ಯ ವಹಿಸಿದ್ದು, ಅವರೇ ಹೊಡೆದು ಕೊಂದಿರುವ ಅನುಮಾನವಿದೆ. ಈ ಕುರಿತು ಪೊಲೀಸರು ಸೂಕ್ತ ತನಿಖೆ ಕೈಗೊಂಡು ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಕುಟುಂಬ ಸದಸ್ಯರಾದ ರೇಖಾಬಾಯಿ, ಎಸ್.ಶೇಖರ್, ರೇವಣಿಬಾಯಿ, ಶಾರದಾಬಾಯಿ ಮತ್ತಿತರರು ಇದ್ದರು.
Next Story





