ಫೆಡ್‌ಕಪ್: ಬೆಂಗಳೂರು ಎಫ್‌ಸಿ ಫೈನಲ್‌ಗೆ
ಕಟಕ್, ಮೇ 14: ಐ-ಲೀಗ್ ಚಾಂಪಿಯನ್ ಐಜ್ವಾಲ್ ಎಫ್‌ಸಿ ವಿರುದ್ಧ 1-0 ಅಂತರದಿಂದ ಜಯ ಸಾಧಿಸಿರುವ ಬೆಂಗಳೂರು ಎಫ್‌ಸಿ ಫೆಡರೇಶನ್ ಕಪ್‌ನಲ್ಲಿ ಫೈನಲ್‌ಗೆ ಪ್ರವೇಶಿಸಿದೆೆ.
ಇಲ್ಲಿ ರವಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ 8ನೆ ನಿಮಿಷದಲ್ಲಿ ಪೆನಾಲ್ಡಿ ಸ್ಟೈಕ್‌ನಲ್ಲಿ ಗೋಲು ಬಾರಿಸಿದ ಕ್ಯಾಮರೂನ್ ವ್ಯಾಟ್ಸನ್ ಬೆಂಗಳೂರಿಗೆ 1-0 ಮುನ್ನಡೆ ಒದಗಿಸಿಕೊಟ್ಟರು. 12ನೆ ನಿಮಿಷದಲ್ಲಿ ಐಜ್ವಾಲ್ ತಂಡ ಕಾಮೊ ಬೆಂಗಳೂರು ಗೋಲುಬಾಕ್ಸ್‌ನತ್ತ ಚೆಂಡನ್ನು ಗುರಿ ಇಟ್ಟಿದ್ದರು. ಆದರೆ,ಜಾನ್ ಜಾನ್ಸನ್ ಇದಕ್ಕೆ ಅವಕಾಶ ನೀಡಲಿಲ್ಲ.
39ನೆ ನಿಮಿಷದಲ್ಲಿ ವ್ಯಾಟ್ಸನ್ ಮತ್ತೊಂದು ಗೋಲು ಬಾರಿಸಲು ಯತ್ನಿಸಿದರು. ಆದರೆ ಚೆಂಡು ಗೋಲುಪೆಟ್ಟಿಗೆಯಿಂದ ಹೊರಹೋಗಿತ್ತು. ಅಂತಿಮವಾಗಿ ಬೆಂಗಳೂರು 1-0 ಅಂತರದಿಂದ ಜಯ ಸಾಧಿಸಿತು.
Next Story





