ಅಪಘಾತದಲ್ಲಿ ಕೊಡಗಿನ ಯುವಕ ಸಾವು

ಮಡಿಕೇರಿ, ಮೇ 14: ಮೈಸೂರಿನಲ್ಲಿ ಶನಿವಾರ ಮಧ್ಯರಾತ್ರಿ ಸಂಭವಿಸಿದ ಅಪಘಾತವೊಂದರಲ್ಲಿ ಮಡಿಕೇರಿ ಬಳಿಯ ಕಡಗದಾಳು ಗ್ರಾಮದ ಯುವಕ ಸಾವನ್ನಪ್ಪಿದ್ದಾನೆ.
ರತ್ನಾಕರ್ (25) ಎಂಬಾ ತನೇ ಸಾವಿಗೀಡಾದ ವ್ಯಕ್ತಿ ಎನ್ನಲಾಗಿದೆ. ಮೈಸೂರಿನ ಮಾನಸಗಂಗೋತ್ರಿ ಬಳಿ ಅತೀ ವೇಗದಿಂದ ಬೈಕ್ ಚಲಾಯಿಸಿದ ರತ್ನಾಕರ್ ರಸ್ತೆ ಉಬ್ಬನ್ನು ಗಮನಿಸದೇ ನಿಯಂತ್ರಣ ತಪ್ಪಿದ್ದಾನೆ. ಈ ಸಂದರ್ಭ ಬೈಕ್ ರಸ್ತೆ ಬದಿಯ ಕಾಲೇಜೊಂದರ ಗೋಡೆಗೆ ಢಿಕ್ಕಿಯಾಗಿದ್ದು, ರತ್ನಾಕರ್ ತಲೆ ಗೋಡೆಗೆ ಬಡಿದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
ಮೃತ ರತ್ನಾಕರ್ ಮಡಿಕೇರಿಯ ಶಕ್ತಿ ಪತ್ರಿಕಾ ಕಾರ್ಯಾಲಯದಲ್ಲಿ ಪ್ರೂಫ್ ರೀಡರ್ ಉದ್ಯೋಗ ದಲ್ಲಿದ್ದರು ಎಂದು ತಿಳಿದುಬಂದಿದ್ದು, ಬಂಧುವಿನ ಮನೆಗೆಂದು ತೆರಳುತ್ತಿದ್ದಾಗ ಅಪಘಾತದಲ್ಲಿ ಸಾವನ್ನಪ್ಪಿ ದ್ದಾರೆ ಎನ್ನಲಾಗಿದೆ.
Next Story





