ದ್ವೇಷದ ರೋಗಕ್ಕೆ ಸೌಹಾರ್ದತೆಯೇ ಔಷಧಿ: ನ್ಯಾ. ಜಯರಾಮ್ ರೈ
ಎಸ್‌ಐಒ ಯಿಂದ ಸಹೋದರತೆಗಾಗಿ ಬಂಟ್ವಾಳ ತಾಲೂಕು ಮಟ್ಟದ ಮ್ಯಾರಥಾನ್
.jpg)
ಬಂಟ್ವಾಳ, ಮೇ 14: ಮನಸ್ಸಿನ ಸಂಕುಚಿತತೆಯಿಂದಾಗಿ ಇಂದು ಜನರ ನಡುವೆ ದ್ವೇಷ ಹೆಚ್ಚಾಗುತ್ತಿದೆ. ಆದ್ದರಿಂದ ಜನರ ನಡುವಿನ ದ್ವೇಷದ ರೋಗಗಳಿಗೆ ಸೌಹಾರ್ದತೆಯೇ ಔಷಧಿ ಎಂದು ಬಂಟ್ವಾಳ ತಾಲೂಕು ವಕೀಲರ ಸಂಘದ ಮಾಜಿ ಅಧ್ಯಕ್ಷ ನ್ಯಾಯವಾದಿ ಜಯರಾಮ್ ರೈ ಹೇಳಿದರು.
ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ(ಎಸ್‌ಐಒ) ಬಂಟ್ವಾಳ ತಾಲೂಕು ವತಿಯಿಂದ ಸಹೋದರತೆಯ ಭಾವನೆಯನ್ನು ಮೂಡಿಸಲು ‘ಹಲವಾರು ಧರ್ಮ ಒಂದು ಭಾರತ’ ಎಂಬ ವಾರ್ಷಿಕ ಅಭಿಯಾನದ ಅಂಗವಾಗಿ ಬಂಟ್ವಾಳ ತಾಲೂಕು ಮಟ್ಟದಲ್ಲಿ 5ರಿಂದ 10ನೆ ತರಗತಿಯ ಮಕ್ಕಳಿಗಾಗಿ ಬಿ.ಸಿ.ರೋಡ್ ಕೈಕಂಬ ಜಂಕ್ಷನ್ ನಲ್ಲಿರುವ ಪೊಳಲಿ ದ್ವಾರದಿಂದ ಬಿ.ಸಿ.ರೋಡ್ ರೈಲು ನಿಲ್ದಾಣದವರೆಗೆ ಇಂದು ಬೆಳಗ್ಗೆ ಹಮ್ಮಿಕೊಳ್ಳಲಾದ ಮ್ಯಾರಥಾನ್ ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಸಹೋದರತೆಯ ಭಾವನೆಯನ್ನು ಮೂಡಿಸಲು ಇಂತಹ ಕಾರ್ಯಕ್ರಮ ಶ್ಲಾಘನೀಯ ಎಂದವರು ಹೇಳಿದರು.
ಮಹೇಶ್ ಪ್ರಥಮ, ಸರ್ಫರಾಝ್ ದ್ವಿತೀಯ:
ಮ್ಯಾರಥಾನ್‌ನಲ್ಲಿ ದೀಪಿಕಾ ಪ್ರೌಢಶಾಲೆ ಮೊಡಂಕಾಪುವಿನ ವಿದ್ಯಾರ್ಥಿಗಳಾದ ಮಹೇಶ್ ಕುಮಾರ್ ಪ್ರಥಮ ಬಹುಮಾನ ಪಡೆದರೆ, ಸರ್ಫರಾಝ್ ಶಾಂತಿಅಂಗಡಿ ದ್ವಿತೀಯ ಬಹುಮಾನ ಪಡೆದುಕೊಂಡರು.
ಎಸ್‌ಐಒ ಕರ್ನಾಟಕ ಸಂಘಟನಾ ಕಾರ್ಯದರ್ಶಿ ಮುಹಮ್ಮದ್ ದಾನಿಶ್ ಪಾಣೆಮಂಗಳೂರು ಮಾತನಾಡಿದರು.
ಎಸ್ ಐ ಒ ಜಿಲ್ಲಾಧ್ಯಕ್ಷ ತಲ್ಹಾ ಇಸ್ಮಾಯೀಲ್, ಎಂ.ಫ್ರೆಂಡ್ಸ್‌ನ ಕಾರ್ಯದರ್ಶಿ ರಶೀದ್ ವಿಟ್ಲ, ಜಮಾಅತೆ ಇಸ್ಲಾಮೀ ಹಿಂದ್‌ನ ಮುಖ್ತಾರ್ ಅಹ್ಮದ್, ಶಾಹುಲ್ ಹಮೀದ್, ಇಬ್ರಾಹೀಂ ಚೆಂಡಾಡಿ, ಎಸ್‌ಐಒ ಪಾಣೆಮಂಗಳೂರು ಅಧ್ಯಕ್ಷ ತಮೀಝ್ ಅಲಿ ಕಾರಾಜೆ, ಸೋಲಿಡಾರಿಟಿ ಯೂತ್ ಮೂವ್‌ಮೆಂಟ್‌ನ ಪದಾಧಿಕಾರಿಗಳು ಭಾಗವಹಿಸಿದ್ದರು.







