ಮ್ಯಾಡ್ರಿಡ್ ಮಾಸ್ಟರ್ಸ್: ನಡಾಲ್ ಫೈನಲ್‌ಗೆ

ಮ್ಯಾಡ್ರಿಡ್, ಮೇ 14: ಸರ್ಬಿಯ ಆಟಗಾರ ನೊವಾಕ್ ಜೊಕೊವಿಕ್‌ರನ್ನು 6-2, 6-4 ಸೆಟ್‌ಗಳ ಅಂತರದಿಂದ ಮಣಿಸಿದ ರಫೆಲ್ ನಡಾಲ್ ಮ್ಯಾಡ್ರಿಡ್ ಮಾಸ್ಟರ್ಸ್ ಟೆನಿಸ್ ಟೂರ್ನಿಯಲ್ಲಿ ಫೈನಲ್‌ಗೆ ಪ್ರವೇಶಿಸಿದ್ದಾರೆ.
ಶನಿವಾರ ನಡೆದ ಪಂದ್ಯದಲ್ಲಿ ಜೊಕೊವಿಕ್‌ರನ್ನು ನೇರ ಸೆಟ್‌ಗಳಿಂದ ಮಣಿಸಿದ ನಡಾಲ್ ಅವರು ಸರ್ಬಿಯ ಆಟಗಾರನ ವಿರುದ್ಧ ಸತತ ಏಳು ಪಂದ್ಯಗಳ ಸೋಲಿನಿಂದ ಹೊರ ಬಂದರು. ಫ್ರೆಂಚ್ ಓಪನ್ ಆರಂಭವಾಗಲು ಇನ್ನು ಎರಡೇ ವಾರ ಬಾಕಿ ಇರುವಾಗ ಸ್ಪೇನ್ ಆಟಗಾರ ನಡಾಲ್ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಮುಂಬರುವ ಫ್ರೆಂಚ್ ಓಪನ್‌ನಲ್ಲಿ ಹಾಲಿ ಚಾಂಪಿಯನ್ ಜೊಕೊವಿಕ್‌ಗೆ ಪ್ರಬಲ ಪೈಪೋಟಿ ನೀಡುವ ಸಾಧ್ಯತೆಯಿದೆ.
ರವಿವಾರ ನಡೆಯಲಿರುವ ಫೈನಲ್‌ನಲ್ಲಿ ಡೊಮಿನಿಕ್ ಥೀಮ್ ಅಥವಾ ಪಾಬ್ಲೊ ಕ್ಯುವಾಸ್‌ರನ್ನು ಎದುರಿಸಲಿರುವ ನಡಾಲ್ ಐದನೆ ಬಾರಿ ಮ್ಯಾಡ್ರಿಡ್ ಓಪನ್ ಪ್ರಶಸ್ತಿ ಜಯಿಸುವತ್ತ ಚಿತ್ತವಿರಿಸಿದ್ದಾರೆ. ಜೊಕೊವಿಕ್ ಹಾಗೂ ನಡಾಲ್ 50ನೆ ಬಾರಿ ಮುಖಾಮುಖಿಯಾದರು. ಒಂದು ವರ್ಷದ ಹಿಂದೆ ಫ್ರೆಂಚ್ ಓಪನ್ ಜಯಿಸಿದ ಬಳಿಕ ಜೊಕೊವಿಕ್ ಕಳಪೆ ಪ್ರದರ್ಶನ ನೀಡುತ್ತಾ ಬಂದಿದ್ದಾರೆ.





