ಸಾಮಾಜಿಕ ಕಳಕಳಿಯುಳ್ಳ ಸಹಕಾರಿ ಬ್ಯಾಂಕ್‌ಗಳು ಅಗತ್ಯ: ಸಚಿವ ಎಚ್.ಕೆ.ಪಾಟೀಲ್

ಬೆಂಗಳೂರು, ಮೇ 14: ಸಾಮಾಜಿಕ ಕಳಕಳಿಯುಳ್ಳ ಸಹಕಾರಿ ಬ್ಯಾಂಕ್‌ಗಳ ಸಂಖ್ಯೆ ಜಾಸ್ತಿಯಾಗಬೇಕಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಎಚ್.ಕೆ.ಪಾಟೀಲ್ ಇಂದಿಲ್ಲಿ ತಿಳಿಸಿದ್ದಾರೆ.
ರವಿವಾರ ನಗರದಲ್ಲಿ ಆಯೋಜಿಸಿದ್ದ ಹೋಟೆಲ್ ಉದ್ಯಮದಾರರ ಸಹಕಾರ ಬ್ಯಾಂಕ್‌ನ 50ನೆ ಸುವರ್ಣ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಾಮಾಜಿಕ ಕಳಕಳಿ ಹೊಂದಿ ಸಾಗುತ್ತಿರುವ ಹಾಗೂ 10 ಉತ್ತಮ ಬ್ಯಾಂಕ್‌ಗಳಲ್ಲಿ ಈ ಬ್ಯಾಂಕ್ ಸೇರಿದೆ. ಅಲ್ಲದೆ, 850 ಕೋಟಿ ರೂ.ಗಳಿಗೂ ಅಧಿಕ ದುಡಿಯುವ ಬಂಡವಾಳ ಹೊಂದಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಬಣ್ಣಿಸಿದರು.
ಹೋಟೆಲ್ ಉದ್ಯಮಿದಾರರ ಸಹಕಾರಿ ಬ್ಯಾಂಕ್ ಇಂದು ಇಷ್ಟೊಂದು ಎತ್ತರಕ್ಕೆ ಬೆಳೆಸುವಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾಗಿದ್ದ ಪುಂಡಲೀಕ ಹಾಲಂಬಿ ಅಪಾರವಾದ ಶ್ರಮ ವಹಿಸಿದ್ದಾರೆ. ಬ್ಯಾಂಕ್‌ನಲ್ಲಿ ಬರುವ ಲಾಭ ಹಂಚಿಕೆ ಮಾಡುತ್ತಾ, ಸಮಾನತೆಯನ್ನು ಪ್ರತಿಪಾದಿಸಿದ್ದರು. ಒಂದು ಜಾತಿ, ಧರ್ಮಕ್ಕೆ ಸೀಮಿತವಾಗದೇ ಎಲ್ಲ ಧರ್ಮದ, ಜಾತಿಯವರಿಗೆ ಬ್ಯಾಂಕ್ ಸಮಾನವಾದ ಅವಕಾಶ ನೀಡುತ್ತಿದೆ ಎಂದರು.
ಮುಂಬೈ, ಹೈದರಾಬಾದ್ ಸೇರಿದಂತೆ ಹಲವು ನಗರಗಳಲ್ಲಿನ ಸಹಕಾರಿ ಬ್ಯಾಂಕ್‌ಗಳು ವಾರ್ಷಿಕ 20 ಸಾವಿರ ಕೋಟಿಗೂ ಅಧಿಕ ಉಳಿತಾಯ ಮಾಡುತ್ತಿವೆ. ಆದರೆ, ನೀವು ಯಾಕೆ ಬೆಳೆಯಲು ಸಾಧ್ಯವಾಗುತ್ತಿಲ್ಲ ಎಂದ ಅವರು, ನೀವು ಹಿಂದುಳಿದಿರಲು ಕಾರಣಗಳೇನು ಹಾಗೂ ಬೆಳವಣಿಗೆ ಇರುವ ಅವಕಾಶಗಳನ್ನು ಬಳಸಿಕೊಂಡು ಮುಂದಕ್ಕೆ ಸಾಗಬೇಕು ಎಂದು ಸಲಹೆ ನೀಡಿದರು.
ಶಾಸಕ ವಿಜಯ ಕುಮಾರ್ ಮಾತನಾಡಿ, ಸಣ್ಣ ಗುರಿ ಇಟ್ಟುಕೊಂಡು ಮುನ್ನಡೆಯುವ ಬದಲಿಗೆ, ದೊಡ್ಡ ಗುರಿ ಇಟ್ಟುಕೊಂಡು ಸಾಗಬೇಕು. ಆಗ ಮಾತ್ರ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಸಹಕಾರಿ ಬ್ಯಾಂಕುಗಳು ಸದಸ್ಯರಿಗೆ ಅಗತ್ಯವಿರುವ ನಿಟ್ಟಿನಲ್ಲಿ ಅನುಕೂಲ ಮಾಡಿಕೊಡಬೇಕು. ಇದರ ಜೊತೆಗೆ ಮಹಿಳಾ ಉದ್ಯಮಿದಾರರನ್ನು ಹೆಚ್ಚಿನ ಪ್ರಮಾಣದಲ್ಲಿ ಪ್ರೋತ್ಸಾಹಿಸಬೇಕು. ಆ ನಿಟ್ಟಿನಲ್ಲಿ ಈ ಬ್ಯಾಂಕ್ ಉತ್ತಮ ಕೆಲಸ ಮಾಡುತ್ತಿದೆ ಎಂದ ಅವರು, ಈ ಸಹಕಾರಿ ಬ್ಯಾಂಕನ್ನು ಬೆಂಗಳೂರಿಗೆ ಮಾತ್ರ ಸೀಮಿತ ಮಾಡದೇ ರಾಜ್ಯಾದ್ಯಂತ ವಿಸ್ತರಿಸಬೇಕು ಎಂದು ಸಲಹೆ ನೀಡಿದರು.
ಸಮಾರಂಭದಲ್ಲಿ ಶಾಸಕ ಗೋಪಾಲ ಪೂಜಾರಿ, ರವಿ ಸುಬ್ರಮಣ್ಯಂ, ಕನ್ನಡ ಸಾಹಿತ್ಯ ಪರಿಷತ್ತುನ ಅಧ್ಯಕ್ಷ ಡಾ.ಮನುಬಳಿಗಾರ್, ಬ್ಯಾಂಕ್‌ನ ಸ್ಥಾಪಕ ನಿರ್ದೇಶಕ ಕೆ.ಸುಬ್ಬರಾವ್, ಅಧ್ಯಕ್ಷ ಶ್ರೀಪತಿರಾವ್ ಸೇರಿ ಮತ್ತಿತರರು ಉಪಸ್ಥಿತರಿದ್ದರು.







