ಯುನಿಫಾರ್ಮ್ ಫೋರ್ಸ್ ಹೆಡ್ ಕ್ವಾಟ್ರರ್ಸ್ ನಲ್ಲಿ ಸೈನಿಕ ಆತ್ಮಹತ್ಯೆ

ಜಮ್ಮು ಕಾಶ್ಮೀರ, ಮೇ 15:ಇಲ್ಲಿನ ಯುನಿಫಾರ್ಮ್ ಫೋರ್ಸ್ ಹೆಡ್ ಕ್ವಾಟ್ರರ್ಸ್ ನಲ್ಲಿ ಸೈನಿಕನೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.
ತಾನು ಬಳಸುತ್ತಿದ್ದ ಗನ್ ನಿಂದಲೇ ಸೈನಿಕ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಎಫ್ ಐ ಆರ್ ದಾಖಲಾಗಿದ್ದು, ತನಿಖೆ ಆರಂಭವಾಗಿದೆ.
ಮೇ 12ರಂದು ಪಾರಾಮಿಲಿಟರಿ ಫೋರ್ಸ್ ತರಬೇತಿ ಕೇಂದ್ರದಲ್ಲಿ ಸಿಆರ್ ಪಿಎಫ್ ಯೋಧ ಅನಿಲ್ ಕುಮಾರ್ ಎಂಬವರು ಆತ್ಮಹತ್ಯೆಗೆ ಶರಣಾಗಿದ್ದರು.
Next Story





