ಆರೆಸ್ಸೆಸ್ ಕಾರ್ಯಕರ್ತನ ಕೊಲೆ: ಮುಖ್ಯ ಆರೋಪಿಗಳ ಬಂಧನ

ಪಯ್ಯನ್ನೂರ್, ಮೇ 15: ಕಣ್ಣೂರ್ ರಾಮಂತಳಿಯಲ್ಲಿ ನಡೆದ ಆರೆಸ್ಸೆಸ್ ಕಾರ್ಯಕರ್ತ ಬಿಜು ಕೊಲೆ ಪ್ರಕರಣದ ಮುಖ್ಯ ಆರೋಪಿ ರೆನಿಷ್ ಮತ್ತು ವಿಪಿನ್‌ರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇದರೊಂದಿಗೆ ಈ ಪ್ರಕರಣದಲ್ಲಿ ಒಟ್ಟು ಐದು ಮಂದಿಯನ್ನು ಬಂಧಿಸದಂತಾಗಿದೆ.
ಪ್ರಕರಣದಲ್ಲಿ ಒಟ್ಟು ಏಳು ಮಂದಿ ಭಾಗಿಯಾಗಿದ್ದಾರೆಂದು ಪೊಲೀಸರು ಹೇಳಿದ್ದಾರೆ. ಆರೋಪಿಗಳಿಗೆ ಬಾಡಿಗೆ ಕಾರುಗೊತ್ತು ಮಾಡಿಕೊಟ್ಟ ವ್ಯಕ್ತಿ ಮತ್ತು ಕಾರಿನ ಮಾಲಕನನ್ನುಪೊಲೀಸರು ಸೆರೆಹಿಡಿದಿದ್ದಾರೆ. ಆರೋಪಿಗಳು ಇನ್ನೊವಾ ಕಾರಿನಲ್ಲಿ ಬಂದಿದ್ದು, ಬೈಕ್‌ನಲ್ಲಿ ಹೋಗುತ್ತಿದ್ದ ಬಿಜುವಿಗೆ ಕಾರು ಢಿಕ್ಕಿಹೊಡೆಸಿ, ಆತ ರಸ್ತೆಬದಿ ಬಿದ್ದಾಗ ಕಾರಿನಲ್ಲಿದ್ದವರಲ್ಲಿ ಇಬ್ಬರು ಇರಿದು ಕೊಲೆಮಾಡಿದ್ದರು. ದುಷ್ಕರ್ಮಿಗಳು ಬಂದ ಕಾರಿನ ಚಿತ್ರ ಸ್ಥಳೀಯ ಅಂಗಡಿಗಳಲ್ಲಿ ಇರಿಸಲಾದ ಸಿಸಿಟಿವಿಯಲ್ಲಿ ದಾಖಲಾಗಿತ್ತು. ಕೊಲೆಯಾದ ಬಿಜು ಸಿಪಿಎಂ ಕಾರ್ಯಕರ್ತ ಧನರಾಜ್ ಕೊಲೆಪ್ರಕರಣದ ಹನ್ನೆರಡನೆ ಆರೋಪಿಯಾಗಿದ್ದಾನೆ.
Next Story





