ಸನ್‌ಸೈಡ್ ಕುಸಿದು ಬಿದ್ದು ಕಾರ್ಮಿಕ ಮೃತ್ಯು
ಪುತ್ತೂರು, ಮೇ 15: ಕೊಟ್ಟಿಗೆಯ ಗೋಡೆ ಕಾಮಗಾರಿಯ ವೇಳೆ ಸನ್‌ಸೈಡ್ ಕುಸಿದು ಬಿದ್ದ ಪರಿಣಾಮ ಕಾರ್ಮಿಕರೋರ್ವರು ಮೃತಪಟ್ಟ ಘಟನೆ ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಕೊಂರ್ಬಡ್ಕ ಎಂಬಲ್ಲಿ ಸೋಮವಾರ ನಡೆದಿದೆ.
ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿ ನಿವಾಸಿ ಮೋನಪ್ಪ ಪೂಜಾರಿ ಎಂಬವರ ಪುತ್ರ ಶೇಖರ್ ಪೂಜಾರಿ (42) ಮೃತರು ಎಂದು ಗುರುತಿಸಲಾಗಿದೆ. ಕೊಂರ್ಬಡ್ಕದ ರವಿಕುಮಾರ್ ಎಂಬವರ ಕೊಟ್ಟಿಗೆಯ ಕೆಲಸದಲ್ಲಿ ನಿರತರಾಗಿದ್ದ ವೇಳೆ ಸನ್‌ಸೈಡ್ ಕುಸಿದು ಬಿದ್ದ ಪರಿಣಾಮ ಗಂಭೀರ ಗಾಯಗೊಂಡಿದ್ದ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟರು ಎಂದು ದೂರಿನಲ್ಲಿ ತಿಳಿದುಬಂದಿದೆ.
Next Story





