ತ್ರಿವಳಿ ತಲಾಖ್ ರದ್ದುಗೊಂಡಲ್ಲಿ ಮುಸ್ಲಿಂ ವಿಚ್ಛೇದನಕ್ಕೆ ಹೊಸ ಕಾನೂನು: ಕೇಂದ್ರ

ಹೊಸದಿಲ್ಲಿ, ಮೇ 15: ತ್ರಿವಳಿ ತಲಾಖ್ ಪದ್ಧತಿಯನ್ನು ಸುಪ್ರೀಂಕೋರ್ಟ್ ಅಸಿಂಧುಗೊಳಿಸಿದಲ್ಲಿ, ಮುಸ್ಲಿಂ ಸಮುದಾಯದ ವಿವಾಹ ಹಾಗೂ ವಿಚ್ಛೇದನಕ್ಕೆ ಸಂಬಂಧಿಸಿ ಹೊಸ ಕಾನೂನೊಂದನ್ನು ತಾನು ರೂಪಿಸುವುದಾಗಿ ಕೇಂದ್ರ ಸರಕಾರ ಸೋಮವಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.
ಸುಪ್ರಿಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹಲ್ ನೇತೃತ್ವದ ನ್ಯಾಯಪೀಠಕ್ಕೆ ಕೇಂದ್ರ ಸರಕಾರದ ಅಟಾರ್ನಿ ಜನರಲ್ ಮುಕುಸ್ ರೋಹಟಗಿ ಈ ವಿಷಯವನ್ನು ತಿಳಿಸಿದ್ದಾರೆ. ತ್ರಿವಳಿ ತಲಾಖ್ ರದ್ದುಪಡಿಸಿದಲ್ಲಿ ಮುಸ್ಲಿಂ ಸಮುದಾಯದಲ್ಲಿ ವಿವಾಹ ಹಾಗೂ ವಿಚ್ಛೇದನವನ್ನು ನಿಯಂತ್ರಿಸಲು ಕೇಂದ್ರ ಸರಕಾರವು ಹೊಸ ಕಾನೂನು ರೂಪಿಸುವುದಾಗಿ ಅವರು ತಿಳಿಸಿದ್ದಾರೆ.
ಒಂದು ವೇಳೆ ತ್ರಿವಳಿ ತಲಾಖ್ ಪದ್ಧತಿಯನ್ನು ರದ್ದುಪಡಿಸಿದಲ್ಲಿ, ಮುಸ್ಲಿಂ ಪುರುಷನೊಬ್ಬ ವಿವಾಹ ವಿಚ್ಛೇದನ ಪಡೆಯಬೇಕಾದರೆ ಆತನಿಗೆ ಇರುವ ಪರ್ಯಾಯ ಮಾರ್ಗಗಳೇನು ಎಂದು ಸುಪ್ರೀಂಕೋರ್ಟ್ ನ್ಯಾಯಪೀಠ ಕೇಳಿದ ಪ್ರ್ನೆಗೆ ರೋಹಟಗಿ ಹೀಗೆ ಉತ್ತರಿಸಿದ್ದಾರೆ.
Next Story