ಬೆಂಜನಪದವು: ಐಎಸ್‌ಐಇ ಸ್ಟೂಡೆಂಟ್ ರಿಸರ್ಚ್ ಅಸೊಸಿಯೇಶನ್ ಉದ್ಘಾಟನೆ

ಮಂಗಳೂರು, ಮೇ 15: ಬೆಂಜನಪದವು ಕೆನರಾ ಎಂಜಿನಿಯರಿಂಗ್ ಕಾಲೇಜಿನಲ್ಲಿ ಐಎಸ್‌ಐಇ ಸ್ಟೂಡೆಂಟ್ ರಿಸರ್ಚ್ ಅಸೊಸಿಯೇಶನ್ ಇದರ ಉದ್ಘಾಟನೆಯನ್ನು ಕಾಲೇಜಿಗೆ ಸಂಘಟನೆಯ ಸದಸ್ಯತನ ಪ್ರಮಾಣಪತ್ರ ಹಸ್ತಾಂತರಿಸುವ ಮೂಲಕ ಕೊಲ್ಕತ್ತಾದ ಪೌಂಡರಿ ಕ್ಲಸ್ಟರ್ ಎಸೋಸಿಯೇಶನ್ ಪ್ರಾಂಶುಪಾಲ ರಾಜೀವ್ ಚೌಧರಿ ನೆರವೇರಿಸಿದರು.
ಕಾಲೇಜು ಸಂಚಾಲಕ ಎಂ.ಪದ್ಮನಾಭ ಪೈ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಐಎಸ್‌ಐಇ ಸಹಯೋಜನಾಧಿಕಾರಿಗಳಾದ ಎಂ.ಸಾಗರನೀಲ್ ತರಪ್‌ದಾರ್, ಅಕ್ಷಯ್ ಮುಸಲೆ, ಕಾಲೇಜಿನ ಪ್ರಾಂಶುಪಾಲ ಡಾ.ಗಣೇಶ್ ವಿ.ಭಟ್, ಮೆಕ್ಯಾನಿಕಲ್ ವಿಭಾಗ ಮುಖ್ಯಸ್ಥ ಡಾ. ಬಿ.ಕೃಷ್ಣ ಪ್ರಭು, ಸಂಘಟನೆಯ ಸಹ ಪ್ರಾಧ್ಯಾಪಕಿ ಮೇಧಾ, ವಿದ್ಯಾರ್ಥಿ ಮುಖ್ಯಸ್ಥ ದೀಪಕ್ ಹೆಚ್. ಶೆಣೈ ಉಪಸ್ಥಿತರಿದ್ದರು.
Next Story





