ಯುವಕನನ್ನು ಸೇನಾ ಜೀಪ್ ಮುಂಭಾಗಕ್ಕೆ ಕಟ್ಟಿದ ಪ್ರಕರಣದಲ್ಲಿ ಅಧಿಕಾರಿಗೆ ಕ್ಲೀನ್ ಚಿಟ್ ನೀಡಿಲ್ಲ: ಸೇನೆ ಸ್ಪಷ್ಟನೆ

ಜಮ್ಮು ಕಾಶ್ಮೀರ, ಮೇ 15: ಸೇನಾ ಜೀಪ್ ನ ಮುಂಭಾಗಕ್ಕೆ ಯುವಕನೋರ್ವನನ್ನು ಕಟ್ಟಿಹಾಕಿದ ಪ್ರಕರಣದ ತನಿಖೆ ನಡೆಯುತ್ತಿದ್ದು, ಸೇನಾಧಿಕಾರಿಗೆ ಕ್ಲೀನ್ ಚಿಟ್ ನೀಡಿಲ್ಲ ಎಂದು ಸೇನೆ ಸ್ಪಷ್ಟಪಡಿಸಿದೆ.
“ವಿಚಾರಣಾ ನ್ಯಾಯಾಲಯ ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದು, ನಾಗರಿಕನನ್ನು ಸೇನಾ ಜೀಪ್ ಮುಂಭಾಗ ಕಟ್ಟಿದ ಬಗೆಗಿನ ತನಿಖೆ ಇನ್ನೂ ಸಂಪೂರ್ಣವಾಗಿಲ್ಲ. ಪ್ರಕರಣದಲ್ಲಿ ಸೇನಾಧಿಕಾರಿಗೆ ಕ್ಲೀನ್ ಚಿಟ್ ನೀಡಲಾಗಿದೆ ಎಂದು ಕೆಲ ಮಾಧ್ಯಮಗಳು ಪ್ರಕಟಿಸಿರುವ ಸುದ್ದಿ ಸತ್ಯಕ್ಕೆ ದೂರವಾಗಿದೆ” ಎಂದು ಸೇನೆಯ ಶ್ರೀನಗರ ವಕ್ತಾರ ರಾಜೇಶ್ ಕಾಲಿಯಾ ಹೇಳಿದ್ದಾರೆ.
ಸೈನಿಕರ ಮೇಲೆ ಕಲ್ಲೆಸೆಯುವವರನ್ನು ನಿಯಂತ್ರಿಸಲು ಕಾಶ್ಮೀರಿ ಯುವಕನೋರ್ವನನ್ನು ಜೀಪ್ ನ ಮುಂಭಾಗಕ್ಕೆ ಕಟ್ಟಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತಲ್ಲದೆ, ಭಾರೀ ವಿವಾದ ಸೃಷ್ಟಿಸಿತ್ತು.
Next Story