ಬಡ ಅಮ್ಮಂದಿರ ನೆರವಿಗೆ ರೈನಾ ಫೌಂಡೇಶನ್

ಹೊಸದಿಲ್ಲಿ, ಮೇ 15: ದೇಶದ ಬಡ ಅಮ್ಮಂದಿರ ನೆರವಿಗಾಗಿ ಭಾರತೀಯ ಕ್ರಿಕೆಟಿಗ ಸುರೇಶ್ ರೈನಾ ಸೋಮವಾರ ಫೌಂಡೇಶನ್‌ವೊಂದನ್ನು ಅನಾವರಣಗೊಳಿಸಿದರು.
ರೈನಾ ಹಾಗೂ ಅವರ ಪತ್ನಿ ಪ್ರಿಯಾಂಕಾ ಅವರು ತಮ್ಮ ಪುತ್ರಿ ಗ್ರೇಸಿಯ ರೈನಾರ ಹುಟ್ಟುಹಬ್ಬದಂದು ಈ ಘೋಷಣೆ ಮಾಡಿದರು.
‘‘ಇದು ನನ್ನ ಹಾಗೂ ನನ್ನ ಪತ್ನಿಗೆ ತುಂಬಾ ವೈಯಕ್ತಿಕ ವಿಷಯವಾಗಿದ್ದು, ನಮ್ಮ ಮಗಳ ಹುಟ್ಟುಹಬ್ಬದಂದು ಈ ಫೌಂಡೇಶನ್ ಸ್ಥಾಪನೆಯ ಬಗ್ಗೆ ಘೋಷಣೆ ಮಾಡಿರುವುದು ವಿಶೇಷವಾಗಿದೆ. ನನ್ನ ಪತ್ನಿ ಈ ನಿಟ್ಟಿಯಲ್ಲಿ ಕೆಲಸ ಮಾಡುತ್ತಿದ್ದು,ಅದಕ್ಕಾಗಿ ಸಾಕಷ್ಟು ಸಮಯ ಹಾಗೂ ಪ್ರಯತ್ನ ಹಾಕುತ್ತಿದ್ದಾಳೆ. ಆಕೆಯ ಸಮಾಜಮುಖಿ ಕೆಲಸಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ’’ ಎಂದು ರೈನಾ ಹೇಳಿದ್ದಾರೆ.
ಈ ಫೌಂಡೇಶನ್‌ನ ಮೂಲಕ ದೇಶದ ಮಹಿಳೆಯರು ಹಾಗೂ ಮಕ್ಕಳಿಗೆ ನೆರವಾಗುವ ವಿಶ್ವಾಸ ನನಗಿದೆ ಎಂದು 223 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಎಡಗೈ ಬ್ಯಾಟ್ಸ್‌ಮನ್ ರೈನಾ ತಿಳಿಸಿದ್ದಾರೆ.
Next Story





