ನಿವೃತ್ತ ಪೊಲೀಸ್ ಪೇದೆ ಆತ್ಮಹತ್ಯೆ
ಗುಂಡ್ಲುಪೇಟೆ. ಮೇ 15: ತಾಲೂಕಿನ ಮೂಡುಗೂರು ಗ್ರಾಮದ ಜಮೀನು ಬಳಿ ನಿವೃತ್ತ ಜೈಲು ಮುಖ್ಯ ಪೇದೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ .
ತಾಲೂಕಿನ ಮೂಡುಗೂರು ಗ್ರಾಮದ ನಿವೃತ್ತ ಜೈಲು ಮುಖ್ಯಪೇದೆ ಪಾಪಣ್ಣ (63) ಆತ್ಮಹತ್ಯೆ ಮಾಡಿಕೊಂಡವರು ಎಂದು ಗುರುತಿಸಲಾಗಿದೆ.
ಕೌಟುಂಬಿಕ ಕಲಹವೇ ಆತ್ಮಹತ್ಯೆಗೆ ಕಾರಣ ಎಂದು ಪ್ರಕರಣ ದಾಖಲಿಸಿಕೊಂಡಿರುವ ಇಲ್ಲಿನ ಠಾಣೆ ಪೊಲೀಸರು ತಿಳಿಸಿದ್ದಾರೆ.
Next Story





