'ಕೌಶಲ್ಯ ಕರ್ನಾಟಕ ಯೋಜನೆಗೆ ಹೆಸರು ನೊಂದಾಹಿಸಿ ಸ್ವಯಂಉದ್ಯೋಗ ರೂಪಿಸಿಕೊಳ್ಳಿ'

ಗುಂಡ್ಲುಪೇಟೆ, ಮೇ 15: ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸಲು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆಯನ್ನು ತಾಲೂಕಿನ ನಿರುದ್ಯೋಗಿಗಳು ಸದುಪಯೋಗ ಪಡೆದುಕೊಳ್ಳುವ ಮೂಲಕ ಉದ್ಯೋಗಸ್ಥರಾಗಬೇಕು ಎಂದು ಕ್ಷೇತ್ರದ ಶಾಸಕರಾದ ಗೀತಾ ಮಹದೇವ ಪ್ರಸಾದ್ ಕರೆ ನೀಡಿದರು.
ಅವರು ಇಂದು ಪಟ್ಟಣದ ಗುರುಭವನದಲ್ಲಿ ತಾಲೂಕು ಅಡಳಿತ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕೌಶಲ್ಯ ಕರ್ನಾಟಕ ಯೋಜನೆಯಡಿ ಯವ ಜನರ ಬೇಡಿಕೆ ಸಮೀಕ್ಷೆ ಮತ್ತು ನೋಂದಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ತಾಲೂಕು ದಂಡಾಧಿಕಾರಿ ಕೆ. ಸಿದ್ದು ಮಾತನಾಡಿ ಕರ್ನಾಟಕ ಕೌಶಲ್ಯ ಮಿಷನ್ ಯುವ ಜನತೆಯಲ್ಲಿ ಉದ್ಯೋಗ ಹೊಂದುವ ಸಾಮರ್ಥ್ಯವನ್ನು ಹೆಚ್ಚಿಸುವ ಕೌಶಲ್ಯಾಭಿವೃದ್ದಿಯನ್ನು ಉತ್ತೇಜಿಸುವ ಸಲುವಾಗಿ ಕೌಶಲ್ಯ ಕರ್ನಾಟಕದ ದೂರದೃಷ್ಟಿಯೊಂದಿಗೆ ಸ್ಥಾಪಿಸಲಾಗಿದ್ದು . ಈ ಮಿಷನ್ ಕೌಶಲ್ಯಯುತ ಮಾನವ ಸಂಪನ್ಮೂಲದ ಬೇಡಿಕೆ ಮತ್ತು ಪೂರೈಕೆಯ ಕೊರೆತೆಯನ್ನು ನೀಗಿಸುವುದಕ್ಕಾಗಿ ಕರ್ನಾಟಕದ ಎಲ್ಲೆಡೆ ತಾಲೂಕು ಕಚೇರಿಗಳಲ್ಲಿ ಕೌಂಟರ್ ತೆರೆದು ನಿರುದ್ಯೋಗಿ ವಿದ್ಯಾರ್ಥಿಗಳ ಹೆಸರನ್ನು ನೊಂದಣೆ ಮಾಡಿಕೊಳ್ಳುವ ಕಾರ್ಯ ಮಾಡುತ್ತಿದ್ದು ವೃತ್ತಿ ತರಬೇತಿಯಲ್ಲಿ ಆಸಕ್ತಿ ಹೊಂದಿದ ಅ್ಯರ್ಥಿಯು ಯಶಸ್ವಿಯಾಗಿ ನೋಂದಣಿ ಮಾಡಿದ ನಂತರ ಅವರು ಸಲ್ಲಿಸಿದ ದಾಖಲೆಗಳ ದೃಢೀಕರಣಕ್ಕಾಗಿ ದೂರವಾಣಿ ಮೂಲಕ ಸಂದರ್ಶನವನ್ನು ಕೈಗೊಳ್ಳಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಗೀತಾ ಮಹದೇವ ಪ್ರಸಾದ್ ಪುರಸಭಾ ಅಧ್ಯಕ್ಷೆ ಭಾಗ್ಯಮ್ಮ, ಸದಸ್ಯರಾದ ಪಿ.ಶಶಿಧರ್ , ಇಂದರ್‌ಚಂದ್, .ಜಿ.ಕೆ.ನಾಗೇಂದ್ರ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್.ರಾಜು, ತಾ.ಪಂ ಇ.ಒ ಪುಷ್ಪ ಕಮ್ಮಾರ್ ಸೇರಿದಂತೆ ಇತರರು ಹಾಜರಿದ್ದರು.







