ಹಕ್ಕು ಪತ್ರಕ್ಕೆ ಆಗ್ರಹಿಸಿ ಧರಣಿ
ದಾವಣಗೆರೆ, ಮೇ 15: ದಲಿತರಿಗೆ ನಿವೇಶನದ ಹಕ್ಕು ಪತ್ರ ನೀಡುವ ಮೂಲಕ ಸೂರು ಕಲ್ಪಿಸುವಂತೆ ಆಗ್ರಹಿಸಿ ಡಿಎಸ್‌ಎಸ್ ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ನಡೆಸಿದರು.
ಡಿಸಿ ಕಚೇರಿ ಮುಂಭಾಗದಲ್ಲಿ ಜವಾಯಿಸಿದ ಕಾರ್ಯಕರ್ತರು ಬಡ ಜನರು ತಮಗೆ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ಘೋಷಣೆ ಕೂಗಿದರು. ನಂತರ ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪಗೆ ಮನವಿ ಸಲ್ಲಿಸಿದರು. ಸಮಿತಿ ಜಿಲ್ಲಾ ಸಂಚಾಲಕ ಹೆಗ್ಗೆರೆ ರಂಗಪ್ಪ ಮಾತನಾಡಿ, ತಾಲೂಕಿನ ಆನಗೋಡು ಹೋಬಳಿ ಕೇಂದ್ರದಲ್ಲಿ ದಲಿತ ಕಾಲನಿಯಲ್ಲಿ ಜನಸಂಖ್ಯೆ ಹೆಚ್ಚಾಗಿರುವ ಕಾರಣದಿಂದಾಗಿ ಪ್ರತ್ಯೇಕ ನಿವೇಶನ ಪಡೆಯಲು ಸಮೀಪದಲ್ಲಿ ಯಾವುದೇ ಸರ್ಕಾರಿ ಜಮೀನು, ಗ್ರಾಮ ಠಾಣಾ ಜಾಗವೇ ಇಲ್ಲ ಎಂದರು.
ಮುಖಂಡರಾದ ಕಬ್ಬಳ್ಳಿ ಮೈಲಪ್ಪ, ಮೆಳ್ಳೆಕಟ್ಟೆ ಪರಶುರಾಮ, ಕೊಡಗನೂರು ಲಕ್ಷ್ಮಣ, ರಾಮಚಂದ್ರಪ್ಪ, ನಿಂಗರಾಜ, ಸುರೇಶ, ಪ್ರಶಾಂತ ಇತರರು ಇದ್ದರು.
Next Story





