ಪಕ್ಕಲಡ್ಕದಲ್ಲಿ ನಂಡೆ ಪೆಂಙಲ್ ಅಭಿಯಾನ

ಮಂಗಳೂರು, ಮೇ 16: ಬಜಾಲ್ ಪಕ್ಕಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ಸಮಿತಿ ಮತ್ತು ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಸಹಯೋಗದೊಂದಿಗೆ ‘ನಂಡೆ ಪೆಂಙಳ್’ ಅಭಿಯಾನದ ಪ್ರಯುಕ್ತ ಜಾಗೃತಿ ಕಾರ್ಯಕ್ರಮ ಸೋಮವಾರ ಪಕ್ಕಲಡ್ಕ ಮದ್ರಸ ಸಭಾಂಗಣದಲ್ಲಿ ಜರಗಿತು.
ದ.ಕ. ಜಿಲ್ಲಾ ಅಝ್ಹರೀಸ್ ಅಧ್ಯಕ್ಷ ಸ್ಥಳೀಯ ಖತೀಬ್ ನಝೀರ್ ಅಝ್ಹರಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಪ್ರವಾದಿಯವರು ಹೇಳಿದಂತೆ ಜನರಲ್ಲಿ ಅತ್ಯುನ್ನತರು ತನ್ನ ಸಂಕಷ್ಟಗಳನ್ನು ಬದಿಗಿಟ್ಟು ಇತರರ ಸಂತೋಷಕ್ಕಾಗಿ ಸಹಾಯಕ್ಕಾಗಿ ಪ್ರಯತ್ನ ಮಾಡುವವರು ನಿಜವಾಗಿಯು ಭಾಗ್ಯವಂತರು ಎಂದರು.
ವಿಷಯ ಮಂಡಿಸಿದ ಅಭಿಯಾನದ ಗೌರವ ಸಲಹೆಗಾರ ರಫೀಕ್ ಮಾಸ್ಟರ್, ಸಮಾಜದ ಕಣ್ಣೀರ ನೋವುಗಳನ್ನು ಸಭೆಯ ಮುಂದೆ ತೆರೆದಿಟ್ಟರು.
ಟ್ಯಾಲೆಂಟ್ ಅಧ್ಯಕ್ಷ ರಿಯಾಝ್ ಅಧ್ಯಕ್ಷತೆ ವಹಿಸಿದ್ದರು. ಹಮೀದ್ ಕಣ್ಣೂರು ಪ್ರಾಸ್ತಾವಿಕವಾಗಿ ಮಾತನಾಡಿದುರ. ಜಮಾಅತ್ ಅಧ್ಯಕ್ಷ ಹಾಜಿ ಅಬೂಬಕರ್, ಯಾಕೂಬ್ ಫೈಝಿ, ಉಪಾಧ್ಯಕ್ಷ ಅಬ್ದುರ್ರಹ್ಮಾನ್ ಹಾಜಿ, ಮದ್ರಸ ಮ್ಯಾನೇಜ್ ಮೆಂಟ್ ನ ಹಮೀದ್‌ಷ ಮಾಮು ಹಾಜಿ, ಈಸ ಕೋಯ ತಂಙಳ್, ನಿಯಾಝ್ ಮತ್ತಿತರರು ಉಪಸ್ಥಿತರಿದ್ದರು.
ಜಮಾಅತ್ ಕಾರ್ಯದರ್ಶಿ ಹಬೀಬುಲ್ಲಾ ವಂದಿಸಿದರು
ಮದ್ರಸ ಸದರ್ ರಫೀಕ್ ಮುಸ್ಲಿಯಾರ್ ಸ್ವಾಗತಿಸಿದರು.





