ಕುದ್ದುಪದವಿನಲ್ಲಿ ಬೆಂಕಿ ಅವಘಡ: ಲಕ್ಷಾಂತರ ವೌಲ್ಯದ ತೆಂಗಿನಕಾಯಿ, ಮರಮುಟ್ಟು ನಾಶ

ವಿಟ್ಲ, ಮೇ 16: ಕೊಟ್ಟಿಗೆಯೊಂದರಲ್ಲಿ ಕಾಣಿಸಿಕೊಂಡ ಆಕಸ್ಮಿಕ ಬೆಂಕಿಯು ದಾಸ್ತಾನು ಕೊಠಡಿಗೆ ವ್ಯಾಪಿಸಿ ಅಪಾರ ನಷ್ಟ ಉಂಟಾದ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕುದ್ದುಪದವಿನ ಅರಿಮೂಲೆ ಎಂಬಲ್ಲಿ ಇಂದು ನಡೆದಿದೆ.
ಬಚ್ಚಲು ಮನೆಯ ಒಲೆಗೆ ಹಾಕಿದ ಬೆಂಕಿಯೇ ಅವಘಡಕ್ಕೆ ಕಾರಣ ಎಂದು ತಿಳಿದುಬಂದಿದೆ. ಬೆಂಕಿಯು ಕೊಟ್ಟಿಗೆಯಿಂದ ಪಕ್ಕದ ದಾಸ್ತಾನು ಕೊಠಡಿಗೂ ವ್ಯಾಪಿಸಿದೆ.
ಇದರಿಂದ ದಾಸ್ತಾನು ಕೊಠಡಿಯಲ್ಲಿದ್ದ ತೆಂಗಿನಕಾಯಿ, ಬೆಲೆಬಾಳುವ ಮರಮುಟ್ಟುಗಳ ಸಹಿತ ಹಲವು ಸಾಮಗ್ರಿಗಳು ಬೆಂಕಿಗಾಹುತಿಯಾಗಿವೆ. ಸುಮಾರು 15 ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ.
ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಿದ್ದಾರೆ.
Next Story





