ಯಗಚಿ ಡ್ಯಾಂನಲ್ಲಿ ಕ್ಲೋರಿನ್ ಗ್ಯಾಸ್ ಸೋರಿಕೆ: 20 ಕ್ಕೂ ಹೆಚ್ಚು ಮಂದಿ ಅಸ್ವಸ್ಥ
.jpg)
ಹಾಸನ, ಮೇ 16: ಯಗಚಿ ಅಣೆಕಟ್ಟಿನಲ್ಲಿ ಕ್ಲೋರಿನ್ ಗ್ಯಾಸ್ ಸೋರಿಕೆಯಾಗಿ 20 ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡ ಘಟನೆ ಬೇಲೂರಿನಲ್ಲಿ ನಡೆದಿದೆ.
ಗ್ಯಾಸ್ ಲೀಕ್ ಆಗಿ ಅದರ ಕ್ಲೋರಿನ್ ಹೊರ ಬಂದಿದ್ದು, ಇದರಿಂದ ವಾಟರ್ ವಿಭಾಗದ ಕರಿಯಪ್ಪ (50) ಅಸ್ವಸ್ಥಗೊಂಡು ಬಿದ್ದಿದ್ದರು. ಇದನ್ನು ಗಮನಿಸಿ ಸಿಬ್ಬಂದಿಗಳಾದ ಲೋಕೇಶ್ (28), ನಾಗರಾಜು (27), ಮೇಸ್ತ್ರಿ ಶಂಕರ್, ಉಷಾ ಸೇರಿದಂತೆ 20ಕ್ಕೂ ಹೆಚ್ಚು ಮಂದಿ ಸೋರಿಕೆಯನ್ನು ತಡೆಯಲು ಯತ್ನಿಸಿ ಅಸ್ವಸ್ಥಗೊಂಡಿದ್ದು, ತಕ್ಷಣ ಅವರನ್ನು ಚಿಕಿತ್ಸೆಗಾಗಿ ಬೇಲೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ನಗರದ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ತಿಳಿದುಬಂದಿದೆ.
Next Story





