ವಿದ್ಯುತ್ ತಂತಿ ಸ್ಪರ್ಶಿಸಿದ ಮಹಿಳೆ ಮೃತ್ಯು

ಸಖರಾಯಪಟ್ಟಣ, ಮೇ16: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿದ ಕಾರಣ ಮಹಿಳೆಯೋರ್ವರು ಮೃತಪಟ್ಟ ಘಟನೆ ಸಮೀಪದ ಶ್ರೀನಿವಾಸಪುರ ಎಂಬಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಸಿದ್ದೇಗೌಡ ಎಂಬವರ ಪತ್ನಿ ರತ್ನಮ್ಮ (45) ಎಂದು ಗುರುತಿಸಲಾಗಿದೆ.
ಆಕೆ ತಮ್ಮ ಅಡಿಕೆ ತೋಟದಲ್ಲಿ ಹಸು ಮತ್ತು ಕುರಿಯನ್ನು ಮೇಯಿಸಿಕೊಂಡು ಹುಲ್ಲು ಕೊಯ್ಯಲು ತೆರಳಿದ್ದಾಗ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಸಖರಾಯಪಟ್ಟಣ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
Next Story





