ಆತ್ಮಹತ್ಯೆ
ಮೂಡುಬಿದಿರೆ, ಮೇ 16: ಅಪಘಾತದಿಂದ ಗಾಯಗೊಂಡು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ತೋಡಾರಿನ ಉಳಾಯಿ ಅಂಗಡಿ ಎಂಬಲ್ಲಿ ನಡೆದಿದೆ.
ಇಲ್ಲಿನ ಹೇಮಚಂದ್ರ (30) ಆತ್ಮಹತ್ಯೆ ಮಾಡಿಕೊಂಡವರೆಂದು ಗುರುತಿಸಲಾಗಿದೆ. ವಾಹನಗಳ ಪೈಂಟಿಂಗ್ ಕೆಲಸ ನಿರ್ವಹಿಸುತ್ತಿದ್ದ ಅವರು ಅವಿವಾಹಿತರಾಗಿದ್ದರು. ಇತ್ತೀಚಿಗೆ ಸಂಭವಿಸಿದ ಅಪಘಾತದಿಂದ ಗಾಯಗೊಂಡ ಬಳಿಕ ಮಾನಸಿಕವಾಗಿ ಖಿನ್ನರಾಗಿದ್ದು, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಇಲ್ಲಿನ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
Next Story





