ಫೇಸ್‌ಬುಕ್‌ಗೆ 1.66 ಲಕ್ಷ ಡಾಲರ್ ದಂಡ

ಪ್ಯಾರಿಸ್, ಮೇ 17: ತನ್ನ ಬಳಕೆದಾರರ ಮಾಹಿತಿಯನ್ನು ಜಾಹೀರಾತುದಾರರು ಪಡೆಯುವುದನ್ನು ತಪ್ಪಿಸಲು ವಿಫಲವಾಗಿರುವುದಕ್ಕಾಗಿ ಫ್ರಾನ್ಸ್‌ನ ಮಾಹಿತಿ ಸಂರಕ್ಷಣೆ ಸಂಸ್ಥೆಯು ಫೇಸ್‌ಬುಕ್‌ಗೆ 1.66 ಲಕ್ಷ ಡಾಲರ್ ದಂಡ ವಿಧಿಸಿದೆ.
ಈ ದಂಡವು ಬೆಲ್ಜಿಯಂ, ನೆದರ್‌ಲ್ಯಾಂಡ್ಸ್, ಸ್ಪೇನ್ ಮತ್ತು ಜರ್ಮನಿಯಲ್ಲಿ ನಡೆಸಲಾಗುತ್ತಿರುವ ಐರೋಪ್ಯ ತನಿಖೆಯ ಭಾಗವಾಗಿದೆ ಎಂದು ಸಂರಕ್ಷಣಾ ಸಂಸ್ಥೆ ಸಿಎನ್‌ಐಎಲ್ ಹೇಳಿದೆ.
Next Story





