ತಮಿಳುನಾಡಿನಲ್ಲಿ ಹೊಸ ಪ್ರಾದೇಶಿಕ ಪಕ್ಷ ಕಟ್ಟಲು ರಜನಿಕಾಂತ್ ಒಲವು
.jpg)
ಚೆನ್ನೈ, ಮೇ 16: ರಾಷ್ಟ್ರೀವಾದಿ ಚಿಂತನೆಯ ರಾಜಕೀಯ ಪಕ್ಷ ಸ್ಥಾಪನೆಗೆ ಸೂಪರ್ ಸ್ಟಾರ್ ರಜನಿಕಾಂತ್ ನಿರ್ಧಾರ ಕೈಕೊಂಡಿದ್ದಾರೆ.
ಅಭಿಮಾನಿಗಳನ್ನು ಭೇಟಿಯಾಗಿ ಈ ಬಗ್ಗೆ ಚರ್ಚಿಸಿರುವ ರಜನಿಕಾಂತ್ ಭ್ರಷ್ಟಾಚಾರ ಮುಕ್ತ ಉತ್ತಮ ಆಡಳಿತ ನೀಡುವ ಉದ್ದೇಶದೊಂದಿಗೆ ರಾಜಕೀಯ ಪಕ್ಷ ಕಟ್ಟುವ ಚಿಂತನೆ ನಡೆಸಿದ್ದಾರೆ. ಡಿ.12ರಂದು ತನ್ನ ಹುಟ್ಟುಹಬ್ಬದಂದು ಪಕ್ಷದ ಹೆಸರು ಘೋಷಿಸುವ ಸಾಧ್ಯತೆ ಇದೆ
ಬಿಜೆಪಿ ಮತ್ತು ಇತರ ರಾಜಕೀಯ ಪಕ್ಷ ಸೇರ್ಪಡೆಯ ಸಾಧ್ಯತೆಯನ್ನು ತಳ್ಳಿ ಹಾಕಿರುವ ರಜನಿಕಾಂತ್ ಪ್ರಸ್ತುತ ರಾಜಕೀಯ ವಿದ್ಯುಮಾನಗಳಿಂದ ಬೇಸತ್ತು ಹೊಸ ರಾಜಕೀಯ ಪಕ್ಷ ಕಟ್ಟುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
Next Story





