ಈ ಅಜ್ಜಿಯ ವ್ಯಾಯಾಮ ವೀಡಿಯೊ ಒಮ್ಮೆ ನೋಡಿದರೆ , ಮತ್ತೊಮ್ಮೆ ನೋಡುವಿರಿ, ಮಗದೊಮ್ಮೆ ನೋಡುವಿರಿ.
ಇದು ಸೂಪರ್ ಹಿಟ್ ವೀಡಿಯೊ

ಹೊಸದಿಲ್ಲಿ, ಮೇ. 16 : ಕಿಲೋಮೀಟರು ಗಟ್ಟಲೆ ಓಡುವ ಮೂಲಕ ಅಂತಾರಾಷ್ಟ್ರೀಯ ಮಟ್ಟದ ಮ್ಯಾರಥಾನ್ ಗಳಲ್ಲಿ ಖ್ಯಾತಿ ಪಡೆದಿರುವ ಮಾಜಿ ಸೂಪರ್ ಮಾಡೆಲ್ ಹಾಗು ನಟ ಮಿಲಿಂದ್ ಸೋಮನ್ ಅವರ ತಾಯಿ ಹೊಸ ದಾಖಲೆಯೊಂದನ್ನು ಮಾಡಿದ್ದಾರೆ.
ಮಹಿಳೆಯರಿಗೆ ಅದರಲ್ಲೂ ಹಿರಿಯ ನಾಗರಿಕರಿಗೆ ಮಾದರಿ ಹಾಗು ಯುವಜನತೆಗೆ ಸ್ಫೂರ್ತಿ ತುಂಬುವ ಈ ವೀಡಿಯೋದಲ್ಲಿ ಮಿಲಿಂದ್ ತಾಯಿ ಉಷಾ ಸೋಮನ್ ಅವರು 1 ನಿಮಿಷ 20 ಸೆಕೆಂಡುಗಳ ಕಾಲ 'ಪ್ಲಾಂಕ್' ವ್ಯಾಯಾಮ ಮಾಡಿ ಎಲ್ಲರ ಹುಬ್ಬೇರಿಸಿದ್ದಾರೆ.
ಪ್ಲಾಂಕ್ (plank) ಅಂದರೆ ಪುಶ್ ಅಪ್ ( ಮೊಣಕೈ ಮೇಲೆ ದೇಹದ ಭಾರ ಹಾಕಿ ) ಮಾದರಿಯ ಭಂಗಿಯಲ್ಲಿ ಆದಷ್ಟು ಗರಿಷ್ಟ ಸಮಯ ಇರುವುದು. 78 ವರ್ಷ ವಯಸ್ಸಿನ ಉಷಾ ಸೋಮನ್ ಗೃಹಿಣಿಯರಂತೆ ಸೀರೆ ಉಟ್ಟುಕೊಂಡು ಈ ವ್ಯಾಯಾಮ ಮಾಡಿರುವುದು ವಿಶೇಷವಾಗಿದೆ.
ಈ ವೀಡಿಯೊವನ್ನು ಇನ್ಸ್ಟಾ ಗ್ರಾಂ ನಲ್ಲಿ ಶೇರ್ ಮಾಡಿರುವ ಮಿಲಿಂದ್ " ಇದು ಮದರ್ಸ್ ಡೇ ವಿಶೇಷ. ಇದು ಆಕೆಯ ಈವರೆಗಿನ ಶ್ರೇಷ್ಠ ಪ್ರದರ್ಶನವೇನಲ್ಲ. ಆದರೂ ಒಳ್ಳೆಯ ಪ್ರದರ್ಶನ. ಜೊತೆಗೆ #Nextispushups ಎಂಬ ಹ್ಯಾಶ್ ಟ್ಯಾಗ್ ಹಾಕುವ ಮೂಲಕ ಶೀಘ್ರವೇ ಉಷಾ ಅವರು ಪುಶ್ ಅಪ್ಸ್ ವ್ಯಾಯಾಮ ಮಾಡುವ ವೀಡಿಯೊ ಬರಲಿದೆ ಎಂಬ ಸೂಚನೆ ನೀಡಿದ್ದಾರೆ.
ವೀಡಿಯೊ ಈಗಾಗಲೇ ಸೂಪರ್ ಹಿಟ್ ಆಗಿದ್ದು 32,000 ಕ್ಕೂ ಹೆಚ್ಚು ಮಂದಿ ವೀಕ್ಷಿಸಿ 11 ಸಾವಿರಕ್ಕೂ ಹೆಚ್ಚು ಲೈಕ್ ಗಳು ಹಾಗು ದೊಡ್ಡ ಸಂಖ್ಯೆಯಲ್ಲಿ ಕಮೆಂಟ್ ಗಳು ಬಂದಿವೆ. ಕಳೆದ ವರ್ಷ ಪುತ್ರನೊಂದಿಗೆ ಬರಿಗಾಲಿನಲ್ಲಿ ಮ್ಯಾರಥಾನ್ ಓಡುವ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿದ್ದ ಉಷಾ ಅಜ್ಜಿ ಈ ಬಾರಿ ಇನ್ನೊಂದು ಸಾಧನೆಯ ಮೂಲಕ ನಮಗೆಲ್ಲರಲ್ಲೂ ಹೊಸ ಚೈತನ್ಯ ತುಂಬಿದ್ದಾರೆ. ಅವರ ಈ ವೀಡಿಯೋದಿಂದ ಹಲವರಿಗೆ ಆರೋಗ್ಯದ ಕಾಳಜಿ ಬರುವುದು ಖಚಿತ.







