ಪರಿಹಾರಕ್ಕೆ ಆಗ್ರಹಿಸಿ ಉದ್ದೂರಹಳ್ಳಿ ಗ್ರಾಮಸ್ಥರಿಂದ ಧರಣಿ
.jpg)
ಹಾಸನ, ಮೇ 16: ಉದ್ದೂರಹಳ್ಳಿಯ ರೈತರಿಂದ ಜಮೀನು ಸ್ವಾಧೀನ ಪಡೆದಿದ್ದು, ಪರಿಹಾರ ನೀಡುವಂತೆ ಆಗ್ರಹಿಸಿ ನಗರಾಭಿವೃದ್ಧಿ ಪ್ರಾಧಿಕಾರದ ಮುಂದೆ ಬಿಜೆಪಿ ಗ್ರಾಮಾಂತರ ಮಂಡಲದ ನೇತೃತ್ವದಲ್ಲಿ ಉದ್ದೂರಹಳ್ಳಿಯ ಗ್ರಾಮಸ್ಥರು ಧರಣಿ ನಡೆಸಿದರು.
ಉದ್ದೂರಹಳ್ಳಿಯ 60 ರೈತರಿಂದ 13 ಎಕರೆ ಜಮೀನನ್ನು ಸ್ವಾಧೀನಕ್ಕೆ ಪಡೆಯಲಾಗಿತ್ತು. ಆದರೇ ಇದುವರೆಗೂ ಭೂಮಿ ಹಾಗೂ ಪರಿಹಾರ ಇಲ್ಲದೆ ರೈತರು ಸಂಕಷ್ಟ ಅನುವಿಸುತ್ತಿದ್ದಾರೆ. ಗ್ರಾಮದಲ್ಲಿ ಸಭೆ ನಡೆಸಿ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಪರಿಹಾರ ನೀಡುವುದಾಗಿ ಕೇವಲ ಮೌಖಿಕವಾಗಿ ಭರವಸೆ ನೀಡುತ್ತಾರೆ ಎಂದು ದೂರಿದರು.
ಪ್ರತಿಭಟನಾ ಸ್ಥಳಕೆ ಆಗಮಿಸಿದ ಹುಡಾ ಅಧ್ಯಕ್ಷರ ಕೃಷ್ಣಕುಮಾರ್ ಮತ್ತು ಆಯುಕ್ತರು ರಮೇಶ್ ರೈತರ ಸಮಸ್ಯೆಯನ್ನು ಆಲಿಸಿ, ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳವುದಾಗಿ ಅವರು ಭರವಸೆ ನೀಡಿದರು.
ಈ ಸಂದರ್ಭ ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಅಗಿಲೆ ಯೋಗೀಶ್, ಪ್ರಧಾನ ಕಾರ್ಯದರ್ಶಿ ಬಿಟ್ಟ ಗೌಡನಹಳ್ಳಿ ಸುರೇಶ್, ಮಂಜು, ದಾಸರಕೊಪ್ಪಲು ರಾಮಕೃಷ್ಣ, ಮಂಜೇಗೌಡ, ನರಸೇಗೌಡ, ಯೋಗೀಶ್ ಇತರರು ಇದ್ದರು.





